ಅತಿವೃಷ್ಠಿ ಪೀಡಿತ ತಾಲೂಕುಗಳಲ್ಲಿ ಹೊನ್ನಾವರವೂ ಒಂದು. ಪ್ರವಾಹದಿಂದ ತತ್ತರಿಸಿ ಜನರ ಜೀವನ ಕಷ್ಟ-ನಷ್ಟಗಳ ನಡುವೆ ಸಾಗಿದೆ.

ರೈತರ ಬೆಳೆಗೆ ಪರಿಹಾರ ಒದಗಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಕೊಳೆರೋಗ ಪೀಡಿತ ಅಡಿಕೆ ಬೆಳೆಗಾರರಿಗೆ, ಪರಿಹಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

RELATED ARTICLES  ಮಲೆನಾಡು ಮತ್ತು ರಾಜ್ಯದ ಕರಾವಳಿಯಲ್ಲಿ ಅಬ್ಬರಿಸಲಿದೆ :ಕುಂಭದ್ರೋಣ ಮಳೆ.

ಅಡಿಗೆ ಬೆಳೆಗಾರರ ನಷ್ಟ ಪರಿಹಾರಕ್ಕಾಗಿ ಇಲಾಖೆ ದಿನಾಂಕ 7-9-2019 ರ ಒಳಗಾಗಿ ಅರ್ಜಿ ಸಲ್ಲಿಸಲು ತಿಳಿಸಿದೆ. ಅರ್ಜಿಯೊಂದಿಗೆ ಪಹಣಿ (ಆರ್.ಟಿ.ಸಿ.), ಆಧಾರ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ಮತ್ತು ಮೊಬೈಲ್ ಸಂಖ್ಯೆ ಒದಗಿಸಲು ತಿಳಿಸಿದೆ.

RELATED ARTICLES  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ದಲ್ಲಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮ ಲೆಕ್ಕಾಧಿಕಾರಿಗಳು ಅಥವಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ಜಿಲ್ಲಾ ಪಂಚಾಯತ) ಹೊನ್ನಾವರ ಇವರಿಗೆ ಅರ್ಜಿ ತಲುಪಿಸುವಂತೆ ತಿಳಿಸಲಾಗಿದೆ.