ಹೊನ್ನಾವರ: ನಿನ್ನೆ ತಡ ರಾತ್ರಿಯಿಂದ ಇವತ್ತಿನ ವರೆಗೂ ಧಾರಕಾರವಾಗಿ, ಸುರಿಯುತ್ತಿರುವ ಮಳೆಯಿಂದಾಗಿ ಭಟ್ಕಳ ತಾಲ್ಲೂಕಿನ ಬೈಲೂರಿನ ಮಾರ್ಕಾಂಡೇಶ್ವರದ ಕುಂಬಾರಕೇರಿ ಹತ್ತಿರ ರೈತರ ಗದ್ದೆಗಳಲ್ಲಿ ನೀರು ತುಂಬಿದ್ದು ರೈತರು ಬೆಳೆದ ಬೆಳೆಗಳಿಗೆ ತುಂಬಾ ನಷ್ಟ ಆಗಿದೆ.

RELATED ARTICLES  ವೃದ್ಧೆಯ ಹೊಟ್ಟೆಯಲ್ಲಿದ್ದ 10 ಕೆ.ಜಿ ಗಡ್ಡೆ.

ನೀರು ರಸ್ತೆಯ ಮೇಲೆ ಹರಿದು ಹೋಗಿದ್ದರಿಂದ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು,ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಕಾಳಜಿ ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಇಲ್ಲಿ ಹೊಳೆಯ ಹೂಳು ತೆಗೆಯುವ ಕಾಮಗಾರಿ ಮಾಡಿದರೆ ಈ ಸಮಸ್ಯೆ ಖಂಡಿತ ಬಗೆಹರಿಬಹುದು ಊರಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES  ಮಾಡಿದ ದಾನ- ಧರ್ಮಾದಿಗಳು ಮಾತ್ರ ನಮ್ಮ ಬೆನ್ನಿಗೆ ನಿಲ್ಲುತ್ತವೆ : ಸ್ವರ್ಣವಲ್ಲೀ ಶ್ರೀ.

ಇತ್ತ ಹೊನ್ನಾವರದ ಮಂಕಿ ಬಣಸಾಲೆಯಲ್ಲಿ ಭಾರಿ ಮಳೆಯಿಂದಾಗಿ ಹೊಳೆಯ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ.