ಕಾರವಾರ: ಗಣೇಶಚತುರ್ಥಿ ಹಬ್ಬ ಹಾಗೂ ಮೊಹರಂ ಹಬ್ಬದ ಆಚರಣೆಯುಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ವೈನ್ ಶಾಪ್ ಹಾಗೂ ಬಾರ್‌ಗಳನ್ನ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಅವರು ಆದೇಶಿಸಿದ್ದಾರೆ.

ಸೆ. 3 ರಂದು ಯಲ್ಲಾಪುರ ಪಟ್ಟಣ ಮತ್ತು ಮಂಚಿಕೇರಿಯಲ್ಲಿ ಪೂರ್ಣ ದಿನ ಬಂದ್, 4 ಮತ್ತು 6 ರಂದು ಮಂಕಿ ಠಾಣಾ ಮತ್ತು ಭಟ್ಕಳ್ ತಾಲೂಕು ವ್ಯಾಪ್ತಿಯಲ್ಲಿ, 4, 6 ಮತ್ತು 8 ರಂದು ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ, 5, 6, 8 ಹಾಗೂ 9 ರಂದು ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ, 6 ಮತ್ತು 8 ರಂದು ಕುಮಟಾ ಹಾಗೂ ಮುಂಡಗೋಡ ತಾಲೂಕಿನಲ್ಲಿ ಬಂದ್.

RELATED ARTICLES  ಕುದುರೆ ಸವಾರಿ ಆತ್ಮವಿಶ್ವಾಸಕ್ಕೆ ಸಹಕಾರಿ: ರಾಘವೇಶ್ವರ ಶ್ರೀ

ಸೆ.8 ರಂದು ಯಲ್ಲಾಪುರ ಪಟ್ಟಣ ಮತ್ತು ಕಿರವತ್ತಿಯಲ್ಲಿ, 6 ರಿಂದ 13 ರವರೆಗೆ ಶಿರಸಿ ತಾಲೂಕು, 6, 8 ಮತ್ತು 10 ರಂದು ಮಲ್ಲಾ ಪುರಠಾಣಾ ವ್ಯಾಪ್ತಿಯಲ್ಲಿ, 6 8 10 ಹಾಗೂ 12 ರಂದು ಜೊಯಿಡಾ ತಾಲೂಕು, ಹಳಿಯಾಳ ಮತ್ತು ದಾಂಡೇಲಿ ನಗರಠಾಣಾ ವ್ಯಾಪ್ತಿಯಲಿ, 6, 8, 10, 11 ಹಾಗೂ 12 ರಂದು ಅಂಕೋಲಾ ತಾಲೂಕು ಮತ್ತು 6, 10 12 ರಂದು ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪೂರ್ಣದಿನ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

RELATED ARTICLES  ಹಿಂಸಾತ್ಮಕವಾಗಿ ತುಂಬಿಕೊಂಡು ಹೋರಿಯ ಸಾಗಾಟ : ಓರ್ವನ ಬಂಧನ