ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಂಟನೆ ತರಗತಿ ಓದುತ್ತಿರುವ ಒಟ್ಟೂ 118 ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡಿದ ಉಚಿತ ಬೈಸಿಕಲ್ ವಿತರಿಸಲಾಯಿತು. ಕೆನರಾ ಎಜ್ಯುಕೇಶನ್ ಸೊಸೈಟಿ ಸದಸ್ಯ ಕೃಷ್ಣದಾಸ ಪೈ ಸಾಂಕೇತಿಕವಾಗಿ ವಿತರಿಸಿ ಮಾತನಾಡುತ್ತಾ, ಸರಕಾರದ ಜನಪ್ರಿಯ ಯೋಜನೆ ವಿದ್ಯಾರ್ಥಿಗಳ ಸದುಪಯೋಗಕ್ಕೆ ಬಳಸಿಕೊಳ್ಳುವಂತಾಗಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎನ್.ಆರ್.ಗಜು ಸೈಕಲ್ ಬಳಕೆಗೆ ಮುನ್ನ ಸರಿಯಾಗಿ ಮತ್ತೊಮ್ಮೆ ಪರೀಕ್ಷಿಸಿ, ಮರು ಜೋಡಣೆ ಮಾಡಿಸಿ ಮಳೆ ಕಳೆದ ತರುವಾಯ ಮಕ್ಕಳಿಗೆ ರೂಢಿ ಮಾಡಿಸಿ ಆಮೇಲೆ ನೀಡಿ ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಪಾಲಕ ಪ್ರತಿನಿಧಿ ಮೀನಾಕ್ಷಿ ಪಟಗಾರ ಉಪಸ್ಥಿತರಿದ್ದರು. ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಶಿಕ್ಷಕ ವಿಷ್ಣು ಭಟ್ಟ ನಿರೂಪಿಸಿದರು. ಪ್ರಜ್ಞಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಿಗಸ್ ವಂದಿಸಿದರು. ಶಿಕ್ಷಕ ಎಸ್.ಪಿ.ಪೈ ಮೇಲುಸ್ತುವಾರಿ ವಹಿಸಿದ್ದರು. ಎಲ್ಲ ಪಾಲಕರೂ ಉಪಸ್ಥಿತರಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನೂ ವರ್ಗ ಶಿಕ್ಷಕರ ಮುಖೇನ ಅವಲೋಕಿಸಿದರು.