ಬರ್ಗಿ ಹಾಗೂ ಮಧ್ಯ ಹಿರೇಗುತ್ತಿಯಲ್ಲಿ ಉಜ್ವಲ ಯೊಜನೆಯಡಿ ಎಲ್.ಪಿ.ಜಿ ಗ್ಯಾಸ್ ವಿತರಣೆ.
ಉಜ್ವಲ ಯೋಜನೆ ಕೇಂದ್ರ ಸರಕಾರ ಜನಪರ ಯೋಜನೆಯಾಗಿದ್ದು ಬಡವರಲ್ಲಿ ಬಡವರನ್ನು ಗುರುತಿಸಿ ಅಂತಹ ಫಲಾನುಭವಿಗಳಿಗೆ ಉಚಿತವಾಗಿ ಎಲ್.ಪಿ.ಜಿ. ಗ್ಯಾಸ್ ಸಂಪರ್ಕದ ಭಾಗ್ಯ ಕಲ್ಪಿಸುತ್ತಿದೆ.
ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಫಲವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರು ಕೃಜೋಡಿಸಿ ದುಡಿಯುತ್ತಿದ್ದಾರೆ.
ಈಗಾಗಲೇ ಕುಮಟಾ ತಾಲೂಕಿನ ಹಲವೆಡೆ ಬಿಜಿಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಫಲಾನುಭವಿಗಳ ಮನೆ ಮನೆಗೆ ತೆರಳಿ ಈ ಯೋಜನೆಯಡಿ ಉಚಿತವಾಗಿ ಎಲ್.ಪಿ.ಜಿ. ಗ್ಯಾಸ್ ವಿತರಿಸುವುದರೊಂದಿಗೆ ತಮ್ಮ ಟ್ರಸ್ಟ್ ವತಿಯಿಂದ ಫಲಾನುಭವಿಗಳಿಗೆ ಗ್ಯಾಸ್ ಲೈಟರನ್ನು ಸಹ ಒದಗಿಸಿದ್ದಾರೆ. ಇದರಿಂದ ಫಲಾನುಭವಿಗಳು ಶ್ರಮವಿಲ್ಲದೇ, ಹಣ ವ್ಯಯಿಸದೇ ಎಲ್ಪಿಜಿ ಗ್ಯಾಸ್ ಸಂಪರ್ಕ ಪಡೆಯುವಂತಾದದ್ದು ಫಲಾನುಭವಿಗಳಲ್ಲಿ ಹರ್ಷ ತಂದಿದೆ.
ಮಧ್ಯ ಹಿರೇಗುತ್ತಿಯ ಗೀತಾ ಹರಿಕಾಂತ, ಪದ್ಮಾ ಹಳ್ಳೇರ, ಸುಜಾತ ಹರಿಕಾಂತ, ಬರ್ಗಿಯ ಬೇಬಿ ಪಟಗಾರ, ಗಂಗೆ ಆಚಾರ್ಯ, ಮಂಕಾಳಿ ಪಟಗಾರ, ಓಮಿ ಪಟಗಾರ, ಶಿವಮ್ಮ ಪಟಗಾರ ಮುಂತಾದ ಫಲಾನುಭವಿಗಳು ಟ್ರಸ್ಟ್ ನ ಸಹಕಾರದಿಂದ ಮನೆಬಾಗಿಲಲ್ಲೇ ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಂಡಿರುವುದರಿಂದ ಫಲಾನುಭವಿಗಳು ಟ್ರಸ್ಟ್ ನ ಹಾಗೂ ಬಿಜೆಪಿ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿದ್ದಾರೆ.