ಸವಿಯಾದ ಕನಸಿಂದ ಸಿಹಿಯಾದ ನೆನಪಿಂದ, ಮಧುರವಾದ ಮುಸ್ಸಂಜೆ ಹೊತ್ತಿನಲ್ಲಿ, ನೇಸರನು ಮಾಯವಾಗುವ ಸಮಯದಿ ಮೊದಲ ಬಾರಿಗೆ, ಪ್ರೇಮದ ಹಾದಿಯಲಿ ಬುಗುರಿಯ ಹಾಗೇ ತಿರುಗುವ ಮನಸ್ಸು, ನೆನಪಿಗೆ ಬಾರದ ಸಾವಿರ ಕನಸಿನ ಸುಂದರ ಅನುಭವದೊಡನೆ ಪ್ರೀತಿಸುತ್ತಿರುವ ಪ್ರೇಮ ದೇವತೆಯನ್ನು ಮರದ ಕೆಳಗಿನಲ್ಲಿ ಸನಿಹಕೆ ಬಂದು ಭೇಟಿ ಮಾಡಿ ತನ್ನನ್ನು ಪರಿಚಯಿಸಿಕೊಂಡು‌, ಕಾಣದ ಹೊಸದೊಂದು ಲೋಕಕೆ ಇತನನ್ನು ಕಣ್ಣೊಟದಿ ಬಲೆ ಬೀಸಿ, ಮನವ ಸೇಳೆದ ತನ್ನ ಪ್ರೀಯತಮೆಯನ್ನು ಮೊಹದ ಅಥಿತಿಯಾಗಿ ಆಸೆಯ ಹೂಗಳ ಚೆಲ್ಲಿದ ಮನದಲಿ ಆಕಾಶದಲ್ಲಿ ಮಿನುಗುವ ಚೆಂದುಳ್ಳಿ ಮುಖದವಳಾದ ನೀನು, ನನ್ನೆದೆಯ

RELATED ARTICLES  “ಹಕ್ಕಿನಷ್ಟೇ ಕರ್ತವ್ಯವೂ ಮುಖ್ಯ”- ಅನಂತ ಶಾನಭಾಗ

ತಳಮಳದ ರೂಪಸಿ ಎಂದು ಅವಳನ್ನು ವರ್ಣಿಸುತ್ತಾ, ಹೃದಯದ ಬಾಗಿಲ‌ ತೇರೆದು ಪ್ರೀತಿಯ ಉತ್ಸವದಲ್ಲಿ ಬೆನ್ನ ಹಿಂದೆ ಬಚ್ಚಿಟ್ಟ ಪುಪ್ಪಗುಚ್ಚವನ್ನು ನೀಡಿ ತನ್ನ ಪ್ರೇಯಸಿಯನ್ನಾ ಜೊತೆ ಜೊತೆಯಲ್ಲಿ ಜೊತೆಯಾಗುವೇ ಬಾ ಎಂದು ಪ್ರೀತಿ ಪಯಣಯದ ಹಾದಿಯಲ್ಲಿ ಮುಂದೆ ಸಾಗುವರು… ಆಗ ಒಲವಿನ ಚಿಲಿಪಿಲಿ ಎರಡು ಹೃದಯದಿ ಸುಂದರ ಸುಖಃಮಯವೂ….

RELATED ARTICLES  ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ಸೂರಜ್ ನಾಯ್ಕ ಸೋನಿ.

ಇಲ್ಲಿ “ಕಲ್ಪನೆಯೆ ಹೆಣ್ಣಾಗಿದೆ…. ಕನಸುಗಳೇ ಬರಹವಾಗಿದೆ”….

ಇಂತಿ ನಿಮ್ಮ ಪ್ರೀತಿಯ ಪುಷ್ಪಹಾಸ ಬಸ್ತಿಕರ‌ ಗೋಕರ್ಣ

ಚಿತ್ರ ಬಿಡಿಸಿದವರು:- ಚೈತ್ರಾ ಶೆಟ್ಟಿ??