ಭಟ್ಕಳ: ಭಟ್ಕಳ ಎಜುಕೇಶನ್ ಟ್ರಸ್ಟ್‍ನ ಹಳೆಯ ವಿದ್ಯಾರ್ಥಿ, ಅನಿವಾಸಿ ಭಾರತೀಯ, ಅಮೇರಿಕಾದಲ್ಲಿ ನೆಲೆಸಿರುವ ವಾಮನ ರಾಮನಾಥ ಶಾನಭಾಗ (ಆನ್ನು) ರವರು ತಾವು ಕಲಿತ ಶಾಲೆಗೆ ಭೇಟಿನೀಡಿ ಶಿಕ್ಷಕ ವಿದ್ಯಾರ್ಥಿಯರೊಂದಿಗೆ ಸಮಾಲೋಚನೆ ನಡೆಸಿದರು.

RELATED ARTICLES  ಹಸಿ ಅಡಿಕೆ ಟೆಂಡರ್ ವ್ಯವಸ್ಥೆ


ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಇವರು “ವಿದ್ಯೆಯನ್ನು ನೀಡಿದ ಶಾಲೆ ತಾಯಿಗೆ ಸಮಾನ. ಜೀವನಪರ್ಯಂತ ಆಕೆಯ ಆರೈಕೆ ಹಳೆವಿದ್ಯಾರ್ಥಿಗಳ ಆದ್ಯ ಕರ್ತವ್ಯ” ವೆಂದು ತಿಳಿಸದರು. ಈ ಸಂಧರ್ಭದಲ್ಲಿ ದಂಪತಿಗಳನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷರಾದ ಡಾ.ಸುರೇಶ ನಾಯಕ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಹಿರಿಯರಾದ ಸುಬ್ರಾಯ ಕಾಮತ, ಅಚ್ಚುತ ಕಾಮತ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES  ಛತ್ರಕೂರ್ವೆಯಲ್ಲಿ ಅದ್ಧೂರಿಯಾಗಿ ಜರುಗಿದ ಸೂಪರ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿ