ಕುಮಟಾ : ಮಹೋನ್ನತ ಮಹತ್ವಾಕಾಂಕ್ಷೆಗಳು ಹಾಗೂ ಬಲಾಢ್ಯ ಯಂತ್ರೋಪಕರಣಗಳೊಂದಿಗೆ ಜುಲೈ 22 ರಂದು ಭಾರತದಚರಿತ್ರಾರ್ಹ ಚಂದ್ರಯಾನ-2 ನಭಕ್ಕೆ ನೆಗೆಯಿತು. ಇದು ವಿಶ್ವಕ್ಕೆ ಭಾರತೀಯ ವ್ಯೋಮ ವಿಜ್ಞಾನದಕೊಡುಗೆಯಾಗಿದೆ. ಈ ಹಿಂದಿನ ಚಂದ್ರಯಾನ-1 ಚಂದ್ರನ ಮೇಲೆ ನೀರಿದೆಎಂದು ರುಜುವಾತುಪಡಿಸಿ ವಿಶ್ವವನ್ನೇ ಅಚ್ಚರಿಗೊಳಿಸಿತ್ತು. ಈ ಬಾರಿ ಚಂದ್ರನ ದಕ್ಷಿಣದ್ರುವ ಪ್ರದೇಶದಲಿ ್ಲರೋವರ್ ಓಡಾಡಿಸಲಿರುವ ಚಂದ್ರಯಾನ-2, ಯಾವೆಲ್ಲಾ ಆವಿಷ್ಕಾರಗಳನ್ನು ಮಾಡಬಹುದು ಎಂಬ ನಿರೀಕ್ಷೆಯು ವಿಶ್ವ ವಿಜ್ಞಾನಿಗಳಿಗೆ ಕೌತುಕಮಯವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನಎಲ್ಲ ವೈಜ್ಞಾನಿಕ ಪರಿಶ್ರಮದಿಂದ ಚಂದ್ರಯಾನ-2 ನ್ನು ಈಗಾಗಲೇ ಚಂದ್ರನ ಸುತ್ತ ಪ್ರದಕ್ಷಿಣೆ ಮಾಡುವಂತೆ ಮಾಡಿದೆ. ದಿನಾಂಕ 07-09-2019 ರಂದು ಮಧ್ಯರಾತ್ರಿ 1.55ಕ್ಕೆ ರೋವರ್ ವಿಕ್ರಮ್‍ಚಂದ್ರನ ಮೇಲ್ಮೈ ಅಂಗಳವನ್ನು ಸ್ಪರ್ಷಿಸಲಿದೆ. ಈ ವಿದ್ಯಮಾನವು ಭಾರತದ ಪಾಲಿಗೆ ಸುವರ್ಣಾಕ್ಷರಗಳಿಂದ ಬರೆಯಬಹುದಾದ ದಿನವಾಗಲಿದ್ದು ಬಾಹ್ಯಾಂತರಿಕ್ಷಯಾತ್ರೆಯಲ್ಲಿ ಭಾರತದ ಅದ್ವಿತೀಯ ಸಾಧನೆ ಆಗಲಿದೆ.
ಇದರದ್ಯೋತಕವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಂದ್ರಯಾನ-2 ಮತ್ತು ವ್ಯೊಮ ವಿಜ್ಞಾನಗಳ ಬಗ್ಗೆ ಅರಿವು ಮೂಡಿಸಲು, ಬಾಹ್ಯಾಕಾಶವಿಜ್ಞಾನದಬಗ್ಗೆ ಆಸಕ್ತಿ ಹೆಚ್ಚಿಸಲುಹಾಗೂ ಮೂಲ ವಿಜ್ಷಾನದಅಧ್ಯಯನಕ್ಕೆವಿದ್ಯಾರ್ಥಿಗಳನ್ನು ಪ್ರಚೋದಿಸಲು ಕೊಂಕಣಎಜ್ಯುಕೇಶನ್‍ಟ್ರಸ್ಟ್ ವತಿಯಿಂದ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶನಿವಾರ, ಸೆಪ್ಟೆಂಬರ್07, 2019 ,ಬೆ. 10:00 ರಿಂದ ಮ. 3:00ರ ವರೆಗೆ ,ಸಿ.ವಿ.ಎಸ್.ಕೆ ಪ್ರೌಢಶಾಲಾ ಸಭಾಭವನದಲ್ಲಿ ‘ಚಂದ್ರಯಾನ-2 ಮತ್ತು ಬಾಹ್ಯಾಕಾಶವಿಜ್ಞಾನ’ ಈ ವಿಷಯದ ಕುರಿತಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೊಂಕಣ ಎಜ್ಯುಕೇಶನ್ ಟ್ರಸ್ಟ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ರಸಪ್ರಶ್ನೆ ಕಾರ್ಯಕ್ರಮದ ಬಹುಮಾನದ ವಿವರ : ಪ್ರಥಮ ಬಹುಮಾನ :ರೂ.5,000 (ಪಾರಿತೋಷಕದೊಂದಿಗೆ), ದ್ವಿತೀಯ ಬಹುಮಾನ :ರೂ.2,500,
ತೃತೀಯ ಬಹುಮಾನ : ರೂ.1,500, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬ ವಿದ್ಯಾರ್ಥಿ/ನಿಯರಿಗೆ ಪ್ರಮಾಣ ಪತ್ರ ನೀಡಲಾಗುವದು.
ಕಾರ್ಯಕ್ರಮದ ಮಾಹಿತಿಗಾಗಿ ಸಂಯೋಜಕರನ್ನು ಸಂಪರ್ಕ ಮಾಡಬಹುದು : ಶ್ರೀಮತಿ ಸುಮಾ ಪ್ರಭು ಮೊ: 9481588997 , ಶ್ರೀ ಎಚ್.ಆರ್.ರವಿಶಂಕರ್ ಮೊ: 9986470425, ಸಿ.ವಿ.ಎಸ್.ಕೆ ಪ್ರೌಢಶಾಲೆ ದೂ: 08386-220841
ಸ್ಪರ್ಧೆಯ ವಿವರ ಹಾಗೂ ಕಾರ್ಯಕ್ರಮ ಮಾಹಿತಿ
ಆಹ್ವಾನಿತ ಪ್ರತಿ ಪ್ರೌಢಶಾಲೆಯಿಂದ ಮೂವರು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ.
ಆಹ್ವಾನಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸ್ಪರ್ಧೆಗೆಆಯಾ ಶಾಲಾ ಸಮವಸ್ತ್ರ ಧರಿಸಿಯೇ ಉಪಸ್ಥಿತರಿರುವದು.
‘ಚಂದ್ರಯಾನ ಹಾಗೂ ನಮ್ಮ ವಿಶ್ವ’ ಈ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುವುದು.
ಮುಂಜಾನೆ10.00 : ಸ್ಪರ್ಧಾಳುಗಳ ನೋಂದಣಿ.
10.30 ರಿಂದ11.30 :50 ಅಂಕದ ಲಿಖಿತ ಪರೀಕ್ಷೆ.
11.30 ರಿಂದ12.00:ಚಂದ್ರಯಾನಕುರಿತಕಿರುಚಿತ್ರ ಪ್ರದರ್ಶನ.
12.00ರಿಂದ1.30 :ಐದು ಸುತ್ತಿನ ಮೌಖಿಕ ಪರೀಕ್ಷೆ.
1.30 ರಿಂದ2.10 :ಮಧ್ಯಾಹ್ನದ ಭೋಜನ.
2.15ರಿಂದ3:00 : ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಣೆಯೊಂದಿಗೆಕಾರ್ಯಕ್ರಮದ ಪರಿಸಮಾಪ್ತಿ.
ವಿ.ಸೂ.:ಅನ್ಯತಾಲೂಕಿನ ವಿದ್ಯಾರ್ಥಿಗಳಿಗೆ ಹಾಗೂ ಜೊತೆಯಲ್ಲಿ ಬರುವಓರ್ವ ಶಿಕ್ಷಕ/ಕಿಯರಿಗೆ ಪ್ರಯಾಣ ಭತ್ಯೆ ನೀಡಲಾಗುವುದು.
ನಮ್ಮತಾಲೂಕಿನವಿದ್ಯಾರ್ಥಿ/ನಿಯರು ಹಾಗೂ ಶಿಕ್ಷಕ/ಕಿಯರು ನಮ್ಮ ಸಂಸ್ಥೆಯ ಶಾಲಾವಾಹನ ಸೌಲಭ್ಯ ಪಡೆದುಕೊಳ್ಳಬಹುದು.