ರಾಜ್ಯದಲ್ಲಿರುವ ಉಪಭಾಷೆಗಳ ಅಭಿವೃದ್ಧಿ ಹಾಗೂ ಆಯಾ ಭಾಷಿಕ ಜನಾಂಗದ ತುಷ್ಠೀಕರಣದ ಸಲುವಾಗಿ ಪ್ರಾದೇಶಿಕ ಭಾಷೆಗಳಿಗೆ ಸರಕಾರ ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪಿಸಿ ಭಾಷೆಯ ಅಧ್ಯಯನ ಹಾಗೂ ಅಧ್ಯಾಪನಕ್ಕೆ ಅವಕಾಶವನ್ನು ಮಾಡಿಕೊಟ್ಟಿದೆ.ಕರ್ನಾಟಕದ ಆಡಳಿತ ಭಾಷೆ ನಂತರದ ಅತೀ ಹೆಚ್ಚು ಜನರಾಡುವ ಭಾಷೆಯಾಗಿ ಕರ್ನಾಟಕದ ಕರಾವಳಿಗುಂಟ ತನ್ನ ಪ್ರಭಾವನ್ನು ಹೊಂದಿರುವ ಭಾಷೆ ಕೊಂಕಣಿ.ಹಿಂದು ,ಮುಸ್ಲಿಂ,ಮತ್ತು ಕ್ರೈಸ್ತ ಈ ಮೂರು ಧರ್ಮದಲ್ಲಿಯೂ ಮಾತೃಭಾಷೆ ಕೊಂಕಣಿ ಯನ್ನಾಡುವ ಜನಾಂಗ ಇದೆ ಅನ್ನುವುದು ಅಷ್ಟೇ ವಿಶೇಷ.ಸರಿಸುಮಾರು ನಲವತ್ತೆರಡಕ್ಕೂ ಅಧಿಕ ಜಾತಿಗಳು ಕೊಂಕಣಿ ಮಾತೃ ಭಾಷೆ ಯನ್ನಾಡುತ್ತಿವೆ.ಈ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಹಲವಾರು ಸಂಘಟನೆಗಳು ಕಾಲಕಾಲಕ್ಕೆ ಮಾಡಿಕೊಂಡು ಬಂದಿದೆ ಹಾಗೆ ನೋಡಿದರೆ ಹಿಂದುಗಳಿಗಿಂತ ಕ್ರೈಸ್ತ ರೇ ಭಾಷೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ಸಾಕಷ್ಟು ಮುಂದಿದ್ದಾರೆ.


ಮಂಗಳೂರು ಭಾಗದಲ್ಲಿ ಹಲವಾರು ಕೊಂಕಣಿ ಭಾಷೆಯ ಚಟುವಟಿಕೆಗಳನ್ನು  ಕೈಗೊಳ್ಳುವ ಸಂಘಟನೆಗಳು ಈ ನಿಟ್ಟಿನ ಜಾಗ್ರತವಾಗಿದೆ. ಉತ್ತರ ಕನ್ನಡ ಜಿಲ್ಲೆ ಹಿಂದುಳಿಯುವಲ್ಲಿ ಇದುವೆರೆಗಿನ ಆಡಳಿತ ಕೊಂಕಣಿಯ ಅಭಿವೃದ್ಧಿಯ ಸಲುವಾಗಿ ಸ್ಥಾಪಿತ ಆಗಿರುವ ಅಕಾಡಮಿಯ ಅಧ್ಯಕ್ಷತೆಯನ್ನು  ಜಿಲ್ಲೆಗೆ ನೀಡದಿರುವುದು ಮತ್ತು ಈ ದಿಸೆಯಲ್ಲಿನ ಕೂಗು ಹಾಗೂ ಅದನ್ನು ಈಡೇರಿಸು ರಾಜಕೀಯ ಇಚ್ಛಾಶಕ್ತಿ ಯ ಕೊರತೆ ಎದ್ದು ಕಾಣಿಸುತ್ತದೆ .ಕೊಂಕಣಿ ಅಕಾಡಮಿಯ ಸ್ಥಾಪನೆ ಆದನಂತರ ಆರಂಭದ ಅಧ್ಯಕ್ಷರಾಗಿ  ಬಿ ವಿ ಬಾಳಿಗಾ,ನಂತರ ಕ್ರಮವಾಗಿ ಅಲೆಕ್ಸನ್ ಡಿಸೋಜಾ,ಬಸ್ತಿ ವಾಮನ್ ಶೈಣೆ ,ಎರಿಕ್ ಓಝಾರಿಯೋ, ಕುಂದಾಪುರ ನಾರಾಯಣ ಖಾರ್ವಿ,  ಕಾಸರಗೋಡು ಚಿನ್ನಾ, ರೋಯ್ ಕ್ಯಾಸ್ಟಲೀನ್ ,ಆರ್ ಪಿ ನಾಯಕ ಇವರುಗಳು ಅಕಾಡಮಿಯ ಸಾರಥ್ಯವನ್ನು ವಹಿಸಿದ್ದಾರೆ. ಇವರುಗಳಲ್ಲಿ ಆರ್ ಪಿ ನಾಯಕ ಹೊರತು ಪಡಿಸಿದರೆ ಉಳಿದೆಲ್ಲವರು ದಕ್ಷಿಣಕನ್ನಡ ಹಾಗೂ ಉಡುಪಿಯವರೇ ಆಗಿದ್ದಾರೆ. ಇತ್ತೀಚಿನ ದಿನಗಳ ವರೆಗೂ ಜಿಲ್ಲೆಯ ಕೊಂಕಣಿ ಭಾಷಿಕ ಪಂಗಡಗಳಲ್ಲಿ ತಮಗೊಂದು ಅಕಾಡಮಿ ಇದೆ ಅನ್ನುವ ಕಲ್ಪನೆಯೂ ಹೆಚ್ಚಿನವರಿಗೆ ಇರಲಿಲ್ಲ. ಕಾಸರಗೋಡು ಚಿನ್ನಾ ಎಂಬ ಸಿನೆಮಾ ನಟ ಹಾಗೂ ನಿರ್ದೇಶಕ ಅಕಾಡಮಿಯ ಅಧ್ಯಕ್ಷ ರಾಗಿ ನೇಮಕ ಆದ ಬಳಿಕ ಅಕಾಡಮಿಗೊಂದು ತಾರಾ ಮೆರಗು ಬಂದ ಪರಿಣಾಮ ಅವರ ಕಾರ್ಯವೈಖರಿ ಹಾಗೂ ಕೊಂಕಣಿ ಭಾಷಿಕ ತೀರಾ ಹಿಂದುಳಿದ ಸಮಾಜದ ಮನೆಮನಗಳನ್ನು ಅವರು ತಲುಪಿದ ಪರಿ ಉತ್ತರಕನ್ನಡದಲ್ಲಿ ಕೊಂಕಣಿ ಅಕಾಡಮಿಯ ಜಾಗ್ರತಿಗೆ ಕಾರಣವಾಯಿತು.
ತೀರಾ ಹಿಂದುಳಿದ ಗೌಳಿ ಜನಾಂಗ ಸಿದ್ದಿ ಜನಾಂಗದವರು ನಿರ್ದೇಶಕರಾಗುವ ಅವಕಾಶ ಅವರ ಅವಧಿಯಲ್ಲಿ ದೊರೆಯಿತು.

RELATED ARTICLES  ಮಾಂಸಕ್ಕಾಗಿ ಎಮ್ಮೆಯನ್ನು ಕಡಿದ ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಜಿಲ್ಲೆಯ ಹಿಂದುಳಿದ ಭಂಡಾರಿ ಸಮಾಜದ ವ್ಯಕ್ತಿಗಳಿಗೂ ಅವರ ಅವಧಿಯಲ್ಲಿ ಮೊದಲ ಬಾರಿ ಸದಸ್ಯತ್ವವನ್ನು ಅಂದಿನ ಸರಕಾರ ನೀಡಿತು. ಇದರ ಪರಿಣಾಮ ಜಿಲ್ಲೆಗೆ ಅಕಾಡಮಿಯ ಅಧ್ಯಕ್ಷತೆಯ ಕೂಗು‌ ಆರಂಭವಾಗಿ ಪ್ರಭಾವಿ ರಾಜಕಾರಣಿ ದೇಶಪಾಂಡೆಯವರು ಜಿಲ್ಲೆಗೆ ಅಧ್ಯಕ್ಷ ಪದವಿ ಒದಗಿಸುವಲ್ಲಿ ಯಶಸ್ವಿಯಾದರು. ದಾಂಡೇಲಿಯ ಆರ್ ಪಿ ನಾಯಕ ಅಧ್ಯಕ್ಷ ರಾದರು ಇದುವರೆಗೂ ಕೊಂಕಣಿ ಭಾಷಾ ಕ್ಷೇತ್ರದಲ್ಲಿ ಪರಿಚಯ ಇರದ ಆರ್ ಪಿ ನಾಯಕರ ನೇಮಕ ಆಶ್ಚರ್ಯ ಕರವಾಗಿದ್ದು ದೇಶಪಾಂಡೆ ಕೃಪಾಪಕಟಾಕ್ಷ ಎಂಬುದೊಂದೆ ಇದಕೆ ಆಧಾರ ಆಯಿತು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ ಆಗಿದೆ.ಈ ಬಾರಿ ನೂತನ ಸರಕಾರ ಅಸ್ತಿತ್ವಕ್ಕೆ  ಬಂದು ಅಕಾಡಮಿಯ ಅಧ್ಯಕ್ಷರ ನೇಮಕಾತಿ ನೆಡೆಯಲಿದೆ.ಈ ಸಂದರ್ಭದಲ್ಲಿ ಇದುವರೆಗೂ ಜಿಲ್ಲೆಯ ಕರಾವಳಿ ಪ್ರದೇಶಕ್ಕೆ ದೊರೆಯದ ಅಧ್ಯಕ್ಷತೆ ದೊರೆಯಬೇಕೆಂಬ ಆಗ್ರಹಗಳು ಕೇಳಿಬರುತ್ತಲಿದೆ.ಮೊನ್ನೆ ಕುಮಟಾದ ಕೊಂಕಣಿ ಮಾನ್ಯತಾ ದಿವಸದ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಖ್ಯಾತ ಉದ್ಯಮಿ ಕೊಂಕಣಿ ಪರಿಷತ್ ಕುಮಟಾದ ಉಪಾಧ್ಯಕ್ಷರಾದ ಮುರಳೀಧರ ಪ್ರಭು ಅವರು ಈ ಬಾರಿ ಕಾರವಾರ ಜಿಲ್ಲೆಗೆ ಅಧ್ಯಕ್ಷತೆ ಕೊಡಬೇಕೆಂದು ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿ ನಾಲ್ಕು ಶಾಸಕರನ್ನು ಹಾಗೂ ಸಂಸದರನ್ನು ಹೊಂದಿರುವ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಈ ಬಾರಿ ಜಿಲ್ಲೆಗೆ ನ್ಯಾಯಸಿಗಲಿದೆ ಎಂಬುದು ಕೊಂಕಣಿ ಭಾಷಿಕರ ನಂಬಿಕೆಆಗಿದೆ.

RELATED ARTICLES  ಸಿದ್ದಾಪುರದಲ್ಲಿ ಚಿಣ್ಣರನ್ನು ಕೈ ಬೀಸಿ ಕರೆಯುತ್ತಿದೆ ಪುಟ್ಟ ಉದ್ಯಾನ!

ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದವೇಳೆ ಉಡುಪಿ ಜಿಲ್ಲೆಯ ಕುಂದಾಪುರದ ನಾರಾಯಣ ಖಾರ್ವಿ ಅವರನ್ನು ಅಧ್ಯಕ್ಷರನ್ನಾಗಿಸಿದೆ .ನಂತರದ ಅವಕಾಶ ದಕ್ಷಿಣಕನ್ನಡ ಜಿಲ್ಲೆಯ ಗಡಿಯ ಕಾಸರಗೋಡು ಚಿನ್ನಾ ಅವರಿಗೆ ಲಭಿಸಿರುವುದರಿಂದ ಈ ಬಾರಿ ಮೂರಕ್ಕೆ ಮೂರು ಶಾಸಕರನ್ನು ಆರಿಸಿ ಕಳುಹಿಸಿರುವ ಕಾರವಾರ ಶೈಕ್ಷಣಿಕ ಜಲ್ಲೆಯ ವ್ಯಾಪ್ತಿಗೇ ಅಕಾಡಮಿಯ ಅಧ್ಯಕ್ಷತೆ ನ್ಯಾಯವಾಗಿ ಸಿಗಬೇಕಾಗಿದೆ ಅಲ್ಲದೇ ತುಳುಅಕಾಡಮಿ ಕೊಡವ ಅಕಾಡಮಿ ಹಾಗೂ ಬ್ಯಾರಿ ಅಕಾಡಮಿ ದಕ್ಷಿಣದ ಪಾಲಾಗಲಿದ್ದು ಕೊಂಕಣಿ ಅಕಾಡಮಿಯಾದರೂ ಉತ್ತರಕನ್ನಡದ ಪಾಲಾಗಲಿದೆಯೇ ? ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರದೊರೆಯಲಿದೆ ಎನ್ನಲಾಗಿದೆ.