ಕುಮಟಾ : ಶಿಕ್ಷಕ , ಕ್ರಿಯಾಶೀಲ ವ್ಯಕ್ತಿತ್ವದ ,ಕ.ಸಾ.ಪಾ ತಾಲೂಕಾ ಅಧ್ಯಕ್ಷರೂ ಆಗಿರುವ ಡಾ. ಶ್ರೀಧರ ಉಪ್ಪಿನ ಗಣಪತಿ ಅವರಿಗೆ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.

ಶ್ರೀಧರ ಗೌಡ ಸಹಶಿಕ್ಷಕ. ಕೇ.ಜಿ.ಎಸ್ ಹೆಗಡೆಎಂ.ಎ. , ಪಿ ಎಚ್ ಡಿ ಪದವಿ ದರರು.1996 ನವೆಂಬರ್ ನಲ್ಲಿ ಹೊನ್ನಾವರ ಜನ್ನ ಕಡಕಲ್ ನಲ್ಲಿ ಸೇವೆ ಪ್ರಾರಂಭಒಟ್ಟು 23 ವರ್ಷಗಳ ಸೇವೆ
2007ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಕ್ಕೆ ಸಾದರಪಡಿಸಿದಪಿಎಚ್ಡಿ ಸಂಶೋಧನಾ ಮಹಾಪ್ರಬಂಧ *ಕಡಲಿಗರಸಂಸ್ಕೃತಿ*  ಗೆ  ಘನ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 

 ಸದರಿ ಮಹಾಪ್ರಬಂಧ *ಕಡಲಿ ಗರ ಸಂಸ್ಕೃತಿ* ಪುಸ್ತಕವನ್ನಾಗಿ ಪ್ರಕಟಿಸಿ ಓದುಗರ ಕೈಗೆ ನೀಡಿದ್ದಾರೆಇದುವರೆಗೆ ಮೂರು ಪುಸ್ತಕಗಳಿಗೆ ಸಂಪಾದಕರಾಗಿ ಹಾಗೂ 4 ಸ್ಮರಣ ಸಂಚಿಕೆ ಗಳಿಗೆ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುತ್ತಾರೆ.ಕುಮಟಾದ ಮಂಜು ಮನೆಯಲ್ಲಿ ಶಿಕ್ಷಕರಾಗಿ ಹಾಗೂ ಹೊಲನಗದ್ದೆ ಸಿಆರ್ ಪಿ ಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ2013ರಿಂದ ಕೆಜಿಎಸ್ ಹೆಗಡೆಯಲ್ಲಿ ಸಹಶಿಕ್ಷಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಸಂಘಟಿಸುವ ಪ್ರತಿ ಕಾರ್ಯಕ್ರಮದಲ್ಲೂ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರ ಮುಖೇನ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ್ದಾರೆ2018ರಲ್ಲಿ ಶಾಲೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಶತಮಾನ ಸಂಭ್ರಮ ಎನ್ನುವ ಶೀರ್ಷಿಕೆಯಡಿಯಲ್ಲಿ ನಾಲ್ಕು ದಿನಗಳ ಕಾರ್ಯಕ್ರಮವನ್ನು ಸಂಘಟಿಸುವ ಮೂಲಕಹೆಣ್ಣುಮಕ್ಕಳ ಶಾಲೆ ಹೆಗಡೆ ಎಲ್ಲರ ಗಮನ ಸೆಳೆದಿತ್ತು ಎನ್ನುವುದು ಉಲ್ಲೇಖನೀಯ.

RELATED ARTICLES  ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಸೋಲಿನ ಕುರಿತು ಆತ್ಮಾವಲೋಕನಾ ಸಭೆ


2016 ಸೆಪ್ಟೆಂಬರ್ ತಿಂಗಳಲ್ಲಿ ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಮೂರು ವರ್ಷದಲ್ಲಿ 3    ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ  ವನ್ನು  ಎರಡೆರಡು ದಿನಗಳ ಕಾರ್ಯಕ್ರಮವಾಗಿ ಸಿ ಗ್ರಾಮಾಂತರ ಪ್ರದೇಶಗಳಾದ ಹೆಗಡೆ ಗುಡಿ ಅಂಗಡಿ ಮತ್ತು ಕತಗಾಲ ನಲ್ಲಿ ಸಂಘಟಿಸುವ ಮೂಲಕ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಹಳ್ಳಿಗಳಿಗೂ ವಿಸ್ತರಿಸಿ ದರು.  ಹಾಗೇ  2 ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ, ಸಂಘಟಿಸಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನಕ್ಕೆ ಪ್ರೋತ್ಸಾಹಿಸಿದ್ದಾರೆ.*ಶಾಲೆ ಅಂಗಳದಲ್ಲಿ ಸಾಹಿತ್ಯ ಮತ್ತು ಜನಪದ ಮಾಲೆ* ಶೀರ್ಷಿಕೆ ಅಡಿಯಲ್ಲಿ 12 ಕಾರ್ಯಕ್ರಮ ಆಯೋಜನೆ.

RELATED ARTICLES  ವಿವೇಕಾನಂದರ ಸ್ಮರಣೆಯೊಂದಿಗೆ ಉತ್ತರ ಕನ್ನಡಕ್ಕೆ "ಮತ್ತೊಮ್ಮೆ ದಿಗ್ವಿಜಯ ಯಾತ್ರೆ". : ನಡೆಯುತ್ತಿದೆ ಭರ್ಜರೀ ತಯಾರಿ.

ಪುಸ್ತಕ ಬಿಡುಗಡೆ ಕವಿಗೋಷ್ಠಿ ಕಥೆ ಮತ್ತು ಕವನ ಸ್ಪರ್ಧೆ ಮಕ್ಕಳಿಗಾಗಿ ಕಥೆ ಕವನ ಸ್ಪರ್ಧೆ* ಸಂಘಟಿಸಿದ್ದುಸಾಹಿತ್ಯ ಪರಿಷತ್ತಿನಲ್ಲಿ ಉತ್ತಮ ಕಾರ್ಯಕ್ರಮ ಸಂಘಟಿಸಿದ ಕ್ಕಾಗಿ *2018ರಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಾರಥ್ಯ* ಪ್ರಶಸ್ತಿ ನೀಡಿ ಗೌರವಿಸಿದೆಜಾನಪದ ವಿಶ್ವವಿದ್ಯಾಲಯದ *ಕರ್ನಾಟಕ ಗ್ರಾಮ ಚರಿತ್ರೆ ಕೋಶ* ಸಿದ್ಧಪಡಿಸುವಲ್ಲಿ *ಕುಮಟಾ ತಾಲೂಕು ಗ್ರಾಮ ಚರಿತ್ರೆ* ಯ    ಕ್ಷೇತ್ರ ತಜ್ಞನಾಗಿ ಅಧ್ಯಯನ ಮಾಡಿ ವರದಿ ಸಾದರಪಡಿಸಿ ರುತ್ತಾರೆ 
ಜಿಲ್ಲಾ ಸಾಹಿತ್ಯ ಸಮ್ಮೇಳನ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕನಕ ಅಧ್ಯಯನ ಪೀಠ ಬೆಂಗಳೂರು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಹೀಗೆ ಹಲವಾರು ಕಡೆ ಪ್ರಬಂಧಕಾರರಾಗಿ ಅತಿಥಿಯಾಗಿ ಕವಿಯಾಗಿ ಪಾಲ್ಗೊಂಡಿರುತ್ತಾರೆ.