ಕುಮಟಾ: 1990 ರಲ್ಲಿ ದೀವಗಿ ಗ್ರಾಮದ ಬಾಡಿಗೆ ಕಟ್ಟಡವೊಂದರಲ್ಲಿ ಸ್ಥಾಪನೆಗೊಂಡ ಪ್ರೌಢಶಾಲೆ ಎರಡು ದಶಕಗಳ ವರೆಗೂ ಅನುದಾನ ರಹಿತವಾಗಿ ಮುನ್ನಡೆದುಕೊಂಡು ಬಂದು ತದನಂದರ ಸರಕಾರಿ ಅನುದಾನಕ್ಕೊಳಪಟ್ಟಿದ್ದು ಆ ಸಮಯದಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಕಠಿಣ ಸೇವೆಯನ್ನು ಸಲ್ಲಸಿಸುತ್ತಾ ಬಂದ ಖ್ಯಾತಿವಂತ ಶಿಕ್ಷಕರು ದಯಾದಂದ ದೇಶಭಂಡಾರಿ. ಅವರದ್ದು ಅಪರೂಪದ ಸೇವಾ ಸಾಧನೆ.

23 ವರ್ಷಗಳಿಂದ ಮುಖ್ಯಾಧ್ಯಾಪಕರಾಗಿಯೂ ಜವಾಬ್ದಾರಿ ನಿರ್ವಹಿಸಿಕೊಂಡು, ಶಾಲಾ ಮೂಲಭೂತ ಸೌಕರ್ಯ ದೊರಕಿಸಿಕೊಡುವಲ್ಲಿ, ಫಲಿತಾಂಶ ವೃದ್ಧಿಸುವಲ್ಲಿ, ಮಕ್ಕಳ ಸಂಖ್ಯೆಯನ್ನು ಕಾಪಾಡಿಕೊಳ್ಳುವಲ್ಲಿ ಇವರ ಪಾತ್ರ ಮಹತ್ತರವಾಗಿದೆ. ಶಾಲಾ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸಂಘ-ಸಂಸ್ಥೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಬಂದಿರುವುದು ಗಮನಾರ್ಹವಾದುದಾಗಿದೆ.

RELATED ARTICLES  ನಾಳೆ ರಾಘವೇಶ್ವರ ಶ್ರೀಗಳ ಉಪಸ್ಥಿತಿಯಲ್ಲಿ ಗೋಕರ್ಣದಲ್ಲಿ ವಿವಿಧ ಕಾರ್ಯಕ್ರಮ.

ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ ಸ್ವಾಸ್ಥ್ಯ ಸಂಕಲ್ಪ ಮತ್ತು ಮಧ್ಯವರ್ಜನ ಶಿಬಿರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರ ಸಂಘಟನೆಯಲ್ಲಿ ಪಾಲ್ಗೊಂಡು ಜಾಗೃತಿ ಕ್ರಮಕ್ಕೆ ಪ್ರೇರಣೆ ಒದಗಿಸುತ್ತಾ ಬಂದಿರುತ್ತಾರೆ. ವಿಷಯ ಸಂಪನ್ಮೂಲ ತಜ್ಞರಾಗಿಯೂ, ಮುಖ್ಯಾಧ್ಯಾಪಕ ಸಂಘದ ಪದಾಧಿಕಾರಿಯಾಗಿಯೂ, ಚುನಾವಣಾ ಪ್ರಕ್ರಿಯಲ್ಲಿ ತರಬೇತುದಾರರಾಗಿಯೂ, ಸಾಹಿತ್ಯಕ ಸಂಘಟನೆಯಲ್ಲೂ ಕ್ರೀಯಾಶೀಲರಾಗಿದ್ದು ಆ ಮೂಲಕ ಸಮಾಜದಲ್ಲಿ ಔನಿತ್ಯವಾದ ಶಿಕ್ಷಕರ ಪಾತ್ರದ ಪಾವಿತ್ಯತೆಯನ್ನು ಎತ್ತಿಹಿಡಿದ ಮುಂಚೂಣಿ ಅಧ್ಯಾಪಕರಲ್ಲೊಬ್ಬರಾಗಿದ್ದಾರೆ. ಇಂತಹವರಿಗೆ ಇಲಾಖೆ ಕೊಡಮಾಡಿದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದಕ್ಕೆ ತುಂಬು ಹೃದಯದ ಶ್ಲಾಘನೆ ವ್ಯಕ್ತವಾಗಿದೆ.

RELATED ARTICLES  ಕುಮಟಾದಲ್ಲಿ ಗೋ ಸಂಜೀವಿನಿ ಅಭಿಯಾನ : ಗಣ್ಯರಿಂದ ಪತ್ರಿಕಾಗೋಷ್ಟಿ