ಐದು ದಿನಗಳ ಹಿಂದ ಆಯತಪ್ಪಿ ಬೋಟ್ ನಿಂದ ನಿರಿಗೆ ಬಿದ್ದ ವ್ಯಕ್ತಿಯ ಮೃತದೇಹ ಕುಮಟಾದ ವನಳ್ಳಿಯ ಭಾಗದಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಶಂಕರ ಮಂಜುನಾಥ ಖಾರ್ವಿ ಎಂದು ಗುರುತಿಸಲಾಗಿದ್ದು ,ಕಲ್ಲು ಬಂಡೆಯಲ್ಲಿ ಸಿಲುಕಿರುವ ಮೃತ ದೇಹವನ್ನು ಕುಮಟಾ PSI ಸಂಪತ್ ಕುಮಾರ ಅವರ ತಂಡ ಮತ್ತು ಲೈಪ್ ಗಾರ್ಡ ಹಾಗೂ ಊರ ಜನರ ಸಹಾಯದೊಂದಿಗೆ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ,ಜೀವದ ಹಂಗು ತೊರೆದು ಹೊರತೆಗೆಯಲಾಗಿದೆ.
ಈತ ಭಟ್ಕಳ ನಿವಾಸಿಯಾಗಿದ್ದು ಐದು ದಿನಗಳ ಹಿಂದೆ ಮಿನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಯತಪ್ಪಿ ಭಟ್ಕಳದ ಮಾವಿನಕೂರ್ವ ಬಂದರಿನ ಸಮೀಪ ನೀರಿನಲ್ಲಿ ಬಿದ್ದು ನಾಪತ್ತೆಯಾಗಿದ್ದ.

RELATED ARTICLES  ಸತತ ಪರಿಶ್ರಮ ಹಾಗೂ ಪ್ರಯತ್ನದ ಮೂಲಕ ಮಾತ್ರ ಯಶಸ್ಸು ಗಳಿಸಲು ಸಾದ್ಯ: ನಾಗರಾಜ ನಾಯಕ ತೊರ್ಕೆ.

ಆದರೆ ದೇಹ ಪತ್ತೆಯಾಗಿರಲಿಲ್ಲ.ಇಂದು ಮೃತ ದೇಹ ಕುಮಟಾ ವನಳ್ಳಿ ಹೆಡ್ಬಂದರ್ ನ ಕಲ್ಲು ಬಂಡೆಯಲ್ಲಿ ಸಿಲುಕಿರುವುದನ್ನು ನೋಡಿದ ಸ್ಥಳಿಯರು ಪೋಲೀಸರಿಗೆ ಮಾಹಿತಿ ನೀಡಿದ್ದು, ಕುಮಟಾ PSI ಹಾಗೂ ಅವರ ತಂಡ,ಲೈಪ್ ಗಾರ್ಡಗಳಾದ ಶಶಿಹಿತ್ತಲ ನಾಗರಾಜ ಹರಿಕಂತ್ರ,ಉದಯ ಎನ್ ಹರಿಕಂತ್ರ, ನಿತ್ಯಾನಂದ ಹರಿಕಂತ್ರ,ಕಮಲಾಕರ,ಆ್ಯಾಂಬುಲೆನ್ಸ ಚಾಲಕ ಬಾಸ್ಕರ,ಪೋಲೀಸ್ ಸಿಬ್ಬಂದಿಗಳು, ಮತ್ತು ಸ್ಥಳಿಯರು ಸೇರಿ ಸತತ ಪ್ರಯತ್ನದಿಂದ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ.

RELATED ARTICLES  ಗೋಕರ್ಣ ಬಸ್ ನಲ್ಲಿ ಮದ್ಯ ಸಾಗಾಟ : ಇಬ್ಬರ ಬಂಧನ.!

ಮೂಲ : UK Express