ಕುಮಟಾ: ಜಗತ್ತಿನಲ್ಲಿ ಯಾವ ಶ್ರೀಮಂತನಿಗೂ ಸಿಗಲಾರದಷ್ಟು ಗೌರವ ಶಿಕ್ಷಕನದ್ದು ಆದ್ದರಿಂದ ಶಿಕ್ಷಣದ ಗುರಿಗಳು ಸಾಬೀತವಾಗಬೇಕಾದುದು ನಿಜವಾಗಿಯೂ ಶಿಕ್ಷಕನಿಂದಲೇ ಎಂಬಂತೆ ಕಾರ್ಯನಿರ್ವಹಿಸುತ್ತಿರುವ ಶ್ರೀ ವೆಂಕಟ್ರಾಯ (ಪಮ್ಮು) ಬೀರಣ್ಣ ನಾಯಕ. ವಿದ್ಯಾರ್ಹತೆ ಎಂ.ಎ, ಬಿ.ಇಡಿ ಒಟ್ಟೂ 28 ವರ್ಷಗಳು. ಈ ಸೇವಾ ಅವಧಿಯಲ್ಲಿ ಇವರು ಮಾಡಿದ ಶೈಕ್ಷಣಿಕ ಮತ್ತು ಶೈಕ್ಷಣೇತರ ಕಾರ್ಯಗಳು ತಾಲೂಕು ಅಂಕೋಲಾದಲ್ಲಿ ಸಂಪನ್ಮೂಲ ವ್ಯಕ್ತಿ, ನಲಿ-ಕಲಿ ವಲಯ ಮತ್ತು ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿ, ತಾಲೂಕು ಅಂಕೋಲಾದಲ್ಲಿ ಪೋನ್- ಇನ್ ಪ್ರೋಗ್ರಾಂನಲಿ,್ಲ ಜಿಲ್ಲಾ ಸಹಾಯವಾಣಿ ಕಾರವಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿರುತ್ತಾರೆ.

ಶೈಕ್ಷಣಿಕ ಗುಣಮಟ್ಟ ಮೌಲ್ಯಾಂಕದಲ್ಲಿ ನಗದು ಬಹುಮಾನ ಪಡೆದಿರುತ್ತಾರೆ. ಗಿ ನೇ ತರಗತಿಯ ಹೊಸ ಪಠ್ಯಪುಸ್ತಕ ರಚನೆಯ (ಪರೀಷ್ಕರಣಾ) ಕಾರ್ಯದಲ್ಲಿ ಭಾಗವಹಿಸಿರುತ್ತಾರೆ. ಗಿ ನೇ ತರಗತಿಯ ಸಮಾಜ ಮತ್ತು ಕನ್ನಡ ವಿಷಯದ ಸಂಪನ್ಮೂಲ ವ್ಯಕ್ತ್ತಿಯಾಗಿ ಶಿಕ್ಷಕರಿಗೆ ತರಬೇೀತಿ ನೀಡಿರುತ್ತಾರೆ. ವಲಯ ಮಟ್ಟ ಮತ್ತು ತಾಲೂಕು ಮಟ್ಟದ ಪ್ರತಿಭಾಕಾರಂಜಿ, ಪಂದ್ಯಾಟ, ಕಲಿಕೋತ್ಸವದ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಉತ್ತಮ ಕ್ರೀಡಾಪಟುವಾಗಿದ್ದು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗಹಿಸಿ 100 ಮೀ ಓಟ, ಚಕ್ರ ಎಸೆತ, ಪವರ್ ಲಿಪ್ಟಿಂಗನಲ್ಲಿ, ವಾಲಿಬಾಲ್ ,ಕಬಡ್ಡಿ ಆಟಗಳಲ್ಲಿ ಜಿಲ್ಲಾ ತಂಡದ ಸದಸ್ಯರಾಗಿ ರಾಜ್ಯಮಟ್ಟದ ಸ್ಪರ್ಧೆಗೆ ಹಲವು ಬಾರಿ ಆಯ್ಕೆಯಾಗಿ ಪ್ರಶಸ್ತಿ ಪತ್ರ ಪಡೆದಿರುತ್ತಾರೆ. ಅಂಕೋಲಾ ತಾಲೂಕಿನಲ್ಲಿ ಕೆಲವು ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿರುತ್ತಾರೆ.

RELATED ARTICLES  ಬಾಡ ಪಂಚಾಯತ ಚುನಾವಣಾ ಅಖಾಡ ಗರಿಗೆದರುವಂತೆ ಮಾಡಿದ ಲಕ್ಷ್ಮಿನಾರಾಯಣ (ಗಿರೀಶ) ನಾಯಕರು

ಆಶುಭಾಷಣ, ಸೆಮಿನಾರ್ ಮಂಡಿಸಿ ತಾಲೂಕಾ ಪ್ರಶಸ್ತಿ ಪಡೆದಿರುತ್ತಾರೆ. ಮುಖ್ಯ ಶಿಕ್ಷಕರ ಬಲವರ್ಧನೆ 45 ದಿನಗಳ ತರಬೆÉೀತಿ ಪಡೆದು ಧಾರವಾಡದ ಆಯುಕ್ತರ ಕಛೇರಿಯಲ್ಲಿ ಏರ್ಪಡಿಸಿದ 18 ಜಿಲ್ಲೆಗಳಲ್ಲಿ ಉತ್ತರಕನ್ನಡದ ಮುಖ್ಯ ಶಿಕ್ಷಕರ ಪರವಾಗಿ ಸೆಮಿನಾರ್ ಮಂಡಿಸಿ “ ಆಜೀಮ್ ಪ್ರೇಮ್‍ಜೀ” ಸೀಸ್ಲೀಪ್ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಪ್ರಶಂಸೆ ಪಡೆದಿರುತ್ತಾರೆ
ದಿನಾಂಕ 07-07-2014 ರಿಂದ ಇಲ್ಲಿಯವರೆಗೆ ಕುಮಟಾ ತಾಲೂಕಿನ ಸ.ಕಿ.ಪ್ರಾ. ಶಾಲೆ ನುಶಿಕೋಟೆಯಲ್ಲಿ ಕಾರ್ಯಪ್ರಾರಂಭಿಸಿದ್ದು ಈ ಅವಧಿಯಲ್ಲಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುರ್ಚಿ, ಡೆಸ್ಕ್, ಸ್ಕಿಪಿಂಗ್ ಸ್ಟಾಂಡ್, ಎಜ್ಯುಶ್ಯಾಟ್, ಟಿವಿ, ಟಿವಿಸ್ಟ್ಯಾಂಡ್, ಬ್ಯಾಂಡ್ ಸೆಟ್ ,ಸ್ಟೂಲ್, ಶಾಲೆಗೆ ಬಣ್ಣ, ವಿದ್ಯಾರ್ಥಿಗಳಿಗೆ ಬ್ಯಾಗ್, ಸಮವಸ್ತ್ರ, ಪಟ್ಟಿ, ಪೆನ್, ವಿದ್ಯಾರ್ಥಿಗಳ ದತ್ತು ಯೋಜನೆ, ಶಾಲೆಗೆ ಕರೆಂಟ್, ಶೌಚಾಲಯ ನವೀಕರಣ, ಶಾಲೆಗೆ ರಸ್ತೆ, ಕಪೌಂಡಗಳನ್ನು ದಾನಿಗಳಿಂದ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್‍ಗಳಿಂದ ನಿರ್ಮಿಸಿಕೊಂಡಿದ್ದಾರೆ.

RELATED ARTICLES  ವೈವಿದ್ಯತೆಯ ಸಂಗಮದ ಕರಾವಳಿ ಉತ್ಸವಕ್ಕೆ ನಡೆದಿದೆ ಭಾರೀ ಸಿದ್ಧತೆ.


2014 ರಿಂದ 2018 ರವರೆಗೆ ವಲಯ ಮಟ್ಟದ ಪ್ರತಿಭಾಕಾರಂಜಿ ಕಲಿಕೋತ್ಸವಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು, ಬಹುಮಾನಗಳನ್ನು ಪಡೆದಿರುತ್ತಾರೆ. 2016-17ರಲ್ಲಿ ಖಿಐಒ ನಲ್ಲಿ ವಲಯಕ್ಕೆ ಪ್ರಥಮ ತಾಲೂಕಿನಲ್ಲಿ ದ್ವಿತೀಯ ಬಹುಮಾನ ಗಳಿಸಿರುತ್ತಾರೆ. ಸತತ ಮೂರು ವರ್ಷಗಳಿಂದ ಮೌಲ್ಯಾಂಕನ ಪರೀಕ್ಷೆಯಲ್ಲಿ ಆಯ್ಕೆ ತಂಡದವರು ವಲಯ, ತಾಲೂಕು, ಜಿಲ್ಲಾ ಮಟ್ಟದವರೆಗೆ ಈ ಶಾಲೆಯನ್ನು ಆಯ್ಕೆ ಮಾಡಿರುತ್ತಾರೆ. 2018-19 ನೇ ಸಾಲಿನಲ್ಲಿ ಉತ್ತಮ ಸಮುದಾಯದತ್ತ ಶಾಲೆ ಸಂಘಟನೆ ಎಂಬ ಬಿರುದನ್ನು ಪಡೆದುಕೊಂಡಿದೆ ಈ ರೀತಿಯಾಗಿ ಶಾಲೆ ಪ್ರಗತಿ ಪಥದತ್ತ ಸಾಗುತ್ತಿದೆ.


ದೊರೆತ ಪುರಸ್ಕಾರಗಳು: 2003-04 ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2014-15 ನೇ ಸಾಲಿನಲ್ಲಿ ಗ್ರಾಮಪಂಚಾಯತ್ ಹಾರವಾಡ ತಾಲುಕು ಅಂಕೋಲಾದವರಿಂದ ಮಾನಪತ್ರ, 2019-20 ನೇ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇಂದು ಪಡೆಯುತ್ತಿದ್ದಾರೆ. ಶಾಲೆಯಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ. ಹೀಗೆ ವೆಂಕಟ್ರಾಯ(ಪಮ್ಮು) ನಾಯಕರ ಸೇವೆ ಶಿಕ್ಷಣ ಕ್ಷೇತ್ರಕ್ಕೆ ಇನ್ನೂ ಹೆಚ್ಚು ಸಿಗಲೆಂಬುವುದೇ ಶಿಕ್ಷಣ ಪ್ರೇಮಿಗಳ ಹಾರೈಕೆ.
ವರದಿ: ಎನ್ ರಾಮು ಹಿರೇಗುತ್ತಿ