ಶಿರಸಿ – ಎರಡು ಹೊಟೇಲ್ ಮಧ್ಯದ ಗೋಡೆ ಕುಸಿದು ಪಕ್ಕದ ಹೋಟಲ್ ನಲ್ಲಿ ಊಟಕ್ಕೆ ಕುಳಿತ ಏಳು ಜನರಲ್ಲಿ ನಾಲ್ಕು ಜನ ಗಾಯಗೊಂಡ ಘಟನೆ ಶಿರಸಿಯ ಶಿವಾಜಿ ವೃತ್ತದ ಬಳಿ ಇರುವ ತೃಪ್ತಿ ಹೊಟೆಲ್ ನಲ್ಲಿ ನಡೆದಿದೆ.

RELATED ARTICLES  ಸಾಲ ವಸೂಲಿಗೆ ತೆರಳಿದ ಸಂದರ್ಭದಲ್ಲಿ ಹೃದಯಾಘಾತ : ಬ್ಯಾಂಕ್ ನೌಕರ ಸಾವು.

ಅಧಿಕ ಮಳೆಯಿಂದಾಗಿ ಗೋಡೆ ಬಿರುಕುಗೊಂಡಿದ್ದು ಇದನ್ನು ಸರಿಪಡಿಸುತ್ತಿರುವ ವೇಳೆ ಕುಸಿದು ಬಿದ್ದಿದೆ ಎನ್ನಲಾಗಿದೆ.

ಜ್ಯೋತಿ ನಾಯ್ಕ,ಪರಮೇಶ್ವರ ,ನಾಗೇಶ ,ವೆಂಕಟೇಶ ನಾಯ್ಕ ಗಾಯಗೊಂಡವರಾಗಿದ್ದಾರೆ.ಈ ವೇಳೆ ಪಕ್ಕದ ಹೋಟಲ್ ನಲ್ಲಿ ಊಟ ಮಾಡುತ್ತಾ ಕುಳಿತಿದ್ದ ಏಳು ಮಂದಿಯಲ್ಲಿ ಮೂರು ಜನರಿಗೆ ಅಲ್ಪ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

RELATED ARTICLES  ಕುಮಟಾ : ಶೇಷಾದ್ರಿಪುರದ ಗುಡ್ಡದಲ್ಲಿ ಬೆಂಕಿ

ಘಟನೆ ಸಂಬಂಧ ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.