ಕುಮಟಾ: ಗುರುನಿಂದನೆ, ಗುರು ಪರಂಪರೆ ಗೌರವಕ್ಕೆ ಧಕ್ಕೆ ತಾರದ ರೀತಿ ನಡೆದುಕೊಳ್ಳುವ ಗುಣ ಕರುಣಿಸು ಗುರುವೇ ಹೇ ದೇವ ಎಂದು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯ ಮಂತ್ರಿ ಲಕ್ಷ್ಮೀಧರ ಗೌಡ ತಾವೇ ಆಯೋಜಿಸಿದ ಶಿಕ್ಷಕರ ದಿನಾಚರಣೆ ದಿನ ವಿನಮ್ರವಾಗಿ ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪಾಲಕರ ಅನುಮತಿ ಮೇರೆಗೆ, ಶಾಲಾ ಮಂತ್ರಿಮಂಡಲವು ಏರ್ಪಡಿಸಿದ ಶಾಲೆಯ ಶಿಕ್ಷಕವೃಂದದವರನ್ನು ಗೌರವಿಸುವ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಿಕೊಂಡರು. ಮಕ್ಕಳ ದಿನಾಚರಣೆಯನ್ನು ಶಿಕ್ಷಕರೂ, ಶಿಕ್ಷಕ ದಿನಾಚರಣೆಯನ್ನು ಮಕ್ಕಳೂ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯದ ಶಾಲೆಯ ಈ ಸಂದರ್ಭದಲ್ಲಿ ವಿದ್ಯಾರ್ಥಿ ಮಂತ್ರಿಮಂಡಲದ ಆಶಯದಂತೆ ಕೇಕ್ ಕತ್ತರಿಸಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ತಿನಿಸುವ ಮೂಲಕ ಮುಖ್ಯಾಧ್ಯಾಪಕ ಎನ್.ಆರ್.ಗಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ ದೆಸೆಯಲ್ಲಿ ಸುಯೋಗ್ಯ ಕಲಿಕಾ ಸಂಘಟನೆ ಪ್ರದರ್ಶಿಸಿದ ಮಾದರಿಯೆನಿಸುವಂತಹ ಅನುಕರಣೀಯ ಆದರ್ಶ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಶಹಬ್ಬಾಸ್ ವ್ಯಕ್ತಪಡಿಸಿದರು. 8 ಮತ್ತು 9 ನೆಯ ತರಗತಿ ಮಕ್ಕಳಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿ ಬಹುಮಾನವನ್ನು ಹಿರಿಯ ವಿದ್ಯಾರ್ಥಿಗಳು ವಿತರಿಸಿದರು. ಕುಮಾರಿ ಮುಕ್ತಾ ಆರ್.ಭಟ್ಟ, ಪವಿತ್ರಾ ಪಟಗಾರ, ಹರ್ಷಿತಾ ನಾಯ್ಕ 9 ನೆಯ ತರಗತಿಯಲ್ಲೂ, ಅದ್ವೈತ್ ಕಡ್ಲೆ, ವಿನುತಾ ಪಟಗಾರ, ಗಾಯತ್ರಿ ಪಟಗಾರ 8 ತರಗತಿಯಲ್ಲೂ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು. ಶಿಕ್ಷಕ ವೃಂದದವರಿಗೆ ವಿವಿಧ ಮೋಜಿನ ಆಟ ಆಡಿಸಿ, ಬಹುಮಾನಿಸಿ ಸಂತೋಷಿಸಿದರು. ವಿದ್ಯಾರ್ಥಿನಿ ಪ್ರತಿನಿಧಿ ರಕ್ಷಿತಾ ಪಟಗಾರ ಬಹುಮಾನ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿನಿಧಿ ಪ್ರಶಾಂತ ನಾಯ್ಕ ನಿರೂಪಿಸಿದರು. ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಶಿಕ್ಷಕ ಸಮುದಾಯಕ್ಕೆ ಕುಮಾರ ಆದಿತ್ಯ ಪಟಗಾರ ವಂದಿಸಿದರು.

RELATED ARTICLES  ಕಲ್ಲಬ್ಬೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕಿ‌ ಶಾರದಾ ಶೆಟ್ಟಿ