ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಮಾವೇಶ -2019 ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಮುಖ್ಯಾತಿಥಿಯಾಗಿ ಶ್ರೀಮತಿ ಸುಧಾ ಮೂರ್ತಿ(ಇನ್ಫೋಸಿಸ್ ) ಹಾಗೂ ಡಾ.ಪ್ರಭಾಕರ ಕೋರೆ ಹಾಗೂ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾವೇಶ -2019 ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಪ್ರಾತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಗೌರವಿಸಲಾಯಿತು.

RELATED ARTICLES  ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಸಮಾಜದ ಸಾಮರಸ್ಯತೆಯ ಕೊಂಡಿ-ನಾಗರಾಜ ನಾಯಕ ತೊರ್ಕೆ

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಎಂ.ಟೆಕ್ ವಿದ್ಯಾರ್ಥಿನಿಯಾದ ಅಂಕೋಲಾದ ಐಶ್ವರ್ಯ ಶೇಖರ ಕೇಣಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ದೀತ್ವಿಯ ಸ್ಥಾನ ಪಡೆದು ಎಂ.ಟೆಕ್ ನಲ್ಲಿ ವಲಸಿ ಡಿಸೈನ್ ಮತ್ತು ಎಂಬೆಡ್ಡೆಡ್ ಸಿಸ್ಟಮ್ ನಲ್ಲಿ ಬೆಳ್ಳಿ ಪದಕವನ್ನು ಶ್ರೀಮತಿ ಸುಧಾಮೂರ್ತಿಯವರಿಂದ ಸ್ವೀಕರಿಸಿದ್ದರು. ಐಶ್ವರ್ಯ ಶೇಖರ್ ಕೇಣಿ ಯವರ ಈ ಸಾಧನೆಗೆ ಕಾಲೇಜ ಶಿಕ್ಷಕ ವೃಂದದವರು ಹಾಗೂ ಊರ ನಾಗರಿಕರು ಅಭಿನಂದಿಸಿದ್ದಾರೆ.
ನಿತೇಶ ಕೇಣಿ