ಹೊನ್ನಾವರ: ಕಳೆದೊಂದು ತಿಂಗಳಿಂದ ಗೇರುಸೊಪ್ಪ ಅಣೆಕಟ್ಟಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಳೆದೆರಡು ದಿನಗಳಿಂದ ಅಣೆಕಟ್ಟಿನ ಒಳ ಹರಿವು ಗರೀಷ್ಟ ಮಟ್ಟವನ್ನು ಮೀರಿದ್ದು, ಡ್ಯಾಮ್ ನ ಸುರಕ್ಷತೆ ದೃಷ್ಟಿಯಿಂದ 75000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಆದ್ದರಿಂದ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಶಾಸಕ ಸುನೀಲ್ ನಾಯ್ಕ ಡ್ಯಾಮ್ ಗೆ ಭೇಟಿ ನೀಡಿ ಡ್ಯಾಮ್ ನ ನೀರಿನ ಮಟ್ಟವನ್ನು ಪರೀಶೀಲಿಸಿದರು.
ಲಿಂಗನಮಕ್ಕಿ ಅಣೆಕಟ್ಟಿನ ನೀರಿನ ಮಟ್ಟ ಮತ್ತು ಅವರ ಮುಂದಿನ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ, ನಮ್ಮ ಗೆರುಸೊಪ್ಪ ಡ್ಯಾಮ್ ಸುರಕ್ಷತೆ ಹಾಗೂ ನದಿಯ ಎಡ ಮತ್ತು ಬಲ ದಂಡೆಯ ಮೇಲೆ ವಾಸಿಸುತ್ತಿರುವ ಜನರ ಹಿತದೃಷ್ಟಿಯಿಂದ, ದೀರ್ಘಕಾಲದ ಚರ್ಚೆ ನಡೆಸಿ ಮುಂದಾಗಬಹುದಾದಂತಹ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸುವ ಸಲುವಾಗಿ 70000 ಕ್ಯೂಸೆಕ್ ನೀರನ್ನು ನದಿಯ ಏರಿಳಿತಕ್ಕೆ ಅನುಗುಣವಾಗಿ, ಹಗಲು ಹೊತ್ತಿನಲ್ಲಿ ಹೊರಬಿಡುವ ತೀರ್ಮಾನವನ್ನು ಕೈಗೊಳ್ಳಲಾಯಿತು ಮತ್ತು ಒಳಹರಿವಿನ ಪ್ರಮಾಣ ಕಡಿಮೆ ಆದಲ್ಲಿ ಹೊರಬಿಡು ನೀರನ ಪ್ರಮಾಣವನ್ನು ಕೂಡ ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಈ ಸಮಯಕ್ಕೆ ಬಂದಂತಹ ಮಾಹಿತಿಯ ಪ್ರಕಾರ ಹೊರ ಬಿಡುವ ನೀರಿನ ಪ್ರಮಾಣವನ್ನು 53000 ಕ್ಯೂಸೆಕ್ ಗೆ ನಿಲ್ಲಿಸಲಾಗಿದೆ.