ಅಂಕೋಲಾ- ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ರಂಗದಲ್ಲಿ ಸಾಧನೆ ತೋರಿದ ಸಾಧಕರನ್ನು ಗುರುತಿಸುವ ಪರಿಪಾಠವನ್ನು ಸತತ ಇಪ್ಪತ್ತೈದು ವರ್ಷಗಳಿಂದಲೂ ಸಂಪ್ರದಾಯವಾಗಿ ರೂಡಿಸಿಕೊಂಡು ಬಂದಿರುವ ಮಹಾಸತಿ ಯುವಕ ಮಂಡಳದ ಕಾರ್ಯ ಶ್ಲಾಘನೀಯ ಎಂದು ಸಮಾಜ ಸೇವಕ ಹಾಗೂ ನಿವೃತ್ತ ಅರಣ್ಯಾಧಿಕಾರಿಗಳಾದ ನಾಗರಾಜ ನಾಯಕ ತೊರ್ಕೆ ನುಡಿದರು.
ಅವರು ಮಹಾಸತಿ ಯುವಕ ಮಂಡಳ ಭಾವಿಕೇರಿ ಇವರು ನಡೆಸಿದ ಇಪ್ಪತ್ತೈದನೆ ಸಾರ್ವಜನಿಕ ಗಣೇಶೋತ್ಸವದ ೫ ನೇ ದಿನದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟು ಗೋವಿಂದ್ರಾಯ ನಾಯಕ ಭಾವಿಕೇರಿ ಮಾತನಾಡಿ ಸತತ ಪರಿಶ್ರಮದಿಂದ ಮುನ್ನಡೆದರೆ ನಾವು ಗುರಿ ತಲುಪಲು ಸಾಧ್ಯ ಎಂಬ ಮಾತನ್ನು ತಿಳಿಸಿ, ಒಲಂಪಿಕ್ ನಲ್ಲಿ ತಮಗೆ ಭಾಗವಹಿಸಲು ಆಗದ ಬಗ್ಗೆ ಬೇಸರ ಸಹ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಯಾಗಿ ಆಗಮಿಸಿದ ಲೇಖಕರು ಕಥೆಗಾರರಾದ ಶ್ರೀವಲ್ಲಿ ಶಿಕ್ಷಕಿ ರೇಷ್ಮಾ ನಾಯಕ ಯುವಕರು ಸಂಘಟಿತರಾದರೆ ಅಸಾಧ್ಯವಾದುದನ್ನು ಸಾಧಿಸಬಹುದು, ಇಂದಿಂದ ವಿದ್ಯಾರ್ಥಿಗಳು ಮೊಬೈಲ್ ವಿಡಿಯೊ ಗೇಮ್ ಗಳಲ್ಲಿ ಮುಳುಗಿ ಗುಗಲ್ ದಾಸರಾಗದೆ ಗುರುವಿನ ಜೊತೆಗೆ ಪುಸ್ತಕದ ಬೆನ್ನು ಹತ್ತಿರ ಅವರಲ್ಲಿ ಸಂಸ್ಕಾರಯುತ ಶಿಕ್ಷಣ ದೊರೆತು ಆ ಶಿಕ್ಷಣ ಅವರನ್ನು ಕೊನೆತನಕ ಕಾಪಾಡಬಲ್ಲದು ಎಂದು ತಿಳಿಸಿದರು. ಸಾಹಿತಿ ಉಲ್ಲಾಸ ಹುದ್ದಾರ ಉಪನ್ಯಾಸ ನೀಡಿದರು. ಭಾವಿಕೇರಿ ಪಂಚಾಯತಿ ಅಧ್ಯಕ್ಷೆ ಸರಿತಾ ಶಂಕರ ಬಲೆಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಕ್ರೀಡಾಪಟು ಗೋವಿಂದ್ರಾಯ ನಾಯಕ,ನಿವೃತ್ತ ಶಿಕ್ಷಕ ವಿ.ಡಿ.ನಾಯಕ ಹಾಗೂ ಎಂ.ಬಿ.ನಾಯಕ ,ಯಕ್ಷಗಾನ ಕಲಾವಿದ ರಾಜೇಶ ನಾಯಕ ಸೂರ್ವೆ, ಕವಯತ್ರಿ ರೇಣುಕಾ ರಮಾನಂದ ನಾಯಕ ಮೊದಲಾದವರ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಸತೀಶ್ ನಾಯಕ ಸ್ವಾಗತಿಸಿದರು.