ಭಟ್ಕಳ: ಭಾವಿಶಿಕ್ಷಕರು ಯುವಶಕ್ತಿಯ ಸಬಲೀಕರನದಕುರಿತು ಚಿಂತನೆ ನಡೆಸಬೇಕು ಎಂದು ಇಲ್ಲಿನ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲದ ಪ್ರಾಚಾರ್ಯ ಡಾ.ಆರ್.ನರಸಿಂಹಮೂರ್ತಿಹೇಳಿದರು. ಅವರು ನೆಹರು ಯುವಕೇಂದ್ರ ಕಾರವಾರ ಇದರ ಭಟ್ಕಳ ಶಾಖೆ ಮತ್ತು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ನೇಬರಹುಡ್ ಯುತ್ ಪಾರ್ಲಿಮೆಂಟ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರಕಾರ ಯುವಜ£ ಸಾಮಾನ್ಯ ಜನತೆಯ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಎಲ್ಲ ಯೋಜನೆಗಳ ತಿಳುವಳಿಕೆ ಸಕಾಲದಲ್ಲಿ ಜನರಿಗೆ ತಲುಪಿಸುವ ಕಾರ್ಯವಾಗಬೇಕು.ಸರಕಾರದ ಜೊತೆ ಜೊತೆಗೆ ಪ್ರಶಿಕ್ಷಣಾರ್ಥಿಗಳೂ ಕೂಡ ಅವುಗಳಕುರಿತು ಅರಿತುಕೊಂಡು ಜನಜಾಗೃತಿಯನ್ನು ಮೂಡಿಸುವ ಕಾರ್ಯಮಾಡಬೇಕು ಹಾಗೆಯೇ ತಾವುಗಳು ಅಂತಹ ಯೋನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಎಂಬ ವಿಯದ ಕುರಿತು ನ್ಯೂ ಇಂಗ್ಲೀಷ ಪೂ.ಕಾಲೇಜಿನಉಪನ್ಯಾಸಕಿ ನಾಗಲಕ್ಷ್ಮೀ ತಿಳಿಸಿಕೊಟ್ಟರಲ್ಲದೇ ಕು. ರಕ್ಷಿತಾ ವಿವಿಧ ಆಸನಗಳ ಪ್ರಾತ್ಯಕಿಕೆ ನಿಡಿದರು.

RELATED ARTICLES  ಗೋವಿಗಾಗಿ ಮೇವು ಸಮರ್ಪಿಸಿ : ಗೋ‌ ಸೇವೆಯಲ್ಲಿ ನೀವೂ ಭಾಗಿಗಳಾಗಿ.


ನ್ಯೂಇಂಗಷಲೀಷ್ ಪ.ಪೂ.ಕಾಲೇಜಿನ ಪ್ರಾಚಾರ್ಯ ವೀರೇಂದ್ರ ಶಾನಭಾಗ ಯುವಕಸಂಘ ಏನು?ಏಕೆ? ಹೇಗೆ? ಎಂಬ ವಿಷಯದಕುರಿತು ಮಾಹಿತಿ ನೀಡಿದರು. ಕುಮಟಾದಸಿಂಡ್ ರುಡಸೆಟ್ ನ ನಿರ್ದೇಶಕ ನವೀನಕುಮಾರ ಟಿ.ಕೌಶಲ್ಯ ತರಬೇತಿ ಕುರಿತು ಮಾಹಿತಿ ನೀಡಿದರು.ವಿಜಯಾ ಬ್ಯಾಂಕ್ ನ ನಿವೃತ್ತ ಚೀಫ್ ಮ್ಯಾನೇಜರ್ ಎಂ.ಆರ್.ನಾಯ್ಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವ ಹಲವು ಯೋನೆಗಳಬಗೆಗೆ ಮಾಹಿತಿ ನೀಡಿದರು. ಕಾರವಾರದ ನೆಹರು ಯುವಕೇಂದ್ರದ ಕಾರ್ಯಕ್ರಮ ಸಂಯೋಜಕ ವಿಪಿನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು.

RELATED ARTICLES  ಅಂಕೋಲಾ : ರಥೋತ್ಸವ ನಡೆಯುವ ರಸ್ತೆಯಲ್ಲಿ ಸ್ವಚ್ಛತೆಗೆ ಸಹಕರಿಸಿದ ಪೌರ ಕಾಮಿ೯ಕರು


ಪ್ರಶಿಕ್ಷಣಾರ್ಥಿಗಳಾದ ಕು.ದೀಪಾ ಮತ್ತು ಕು.ಲಕ್ಷ್ಮೀನರ್ವಹಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ ಹಾಗೂ ಪ್ರಶಿಕ್ಷಣಾಥಿಗಳು ಹಾಗೂ ಸಾರ್ವಜನಿಕರು ಉಪ್ಥಿತರಿದ್ದರು.