ಕುಮಟಾ: ಮಣಕಿ ಮೈದಾನದಲ್ಲಿ ನಡೆದ ತಾಲೂಕಾ ಮಟ್ಟದ ಶಾಲಾ ಕ್ರೀಡಾ ಕೂಟದಲ್ಲಿ ನಿರ್ಮಲಾ ಕಾನ್ವೆಂಟ್ ಸ್ಕೂಲ್ ಕುಮಟಾ ಶಾಲೆಯ ವಿದ್ಯಾರ್ಥಿನಿ ಕು|| ಇಂಚರ ಶ್ರೀಪಾದ ನಾಯ್ಕ 100ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಸತತ ಮೂರು ವರ್ಷಗಳಿಂದ 100 ಮೀಟರ್

RELATED ARTICLES  ಬೆಳಕು ಟ್ರಸ್ಟ್ ನ ಸಹಯೋಗದಲ್ಲಿ ಮುಂದುವರಿದ ಉಜ್ವಲಯೋಜನೆಯ ಗ್ಯಾಸ್ ವಿತರಣಾ ಕಾರ್ಯಕ್ರಮ

ಪ್ರಥಮ ಸ್ಥಾನ ಪಡೆಯುತ್ತಿದ್ದು 2019-20 ನೇ ಸಾಲಿನ ಕ್ರೀಡಾಕೂಟದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಹಾಗೂ ಊರಿನ ಗೌರವವನ್ನು ಹೆಚ್ಚಿಸಿದ್ದಾರೆ.ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲೆಯಿಂದ, ಊರಿನ ಜನತೆಯಿಂದ ಹಾಗೂ ಕುಟುಂಬದವರಿಂದ ಅಭಿನಂದನೆ ಸಲ್ಲಿಸಿದ್ದು ಮುಂದಿನ ಜಿಲ್ಲಾ ಮಟ್ಟದ ಹಂತದಲ್ಲೂ ಯಶಸ್ಸು ಸಿಗಲೆಂದು ಶುಭ ಹಾರೈಸಿದ್ದಾರೆ.

RELATED ARTICLES  ಕುಮಟಾ : ಹೆಗಡೆಯಲ್ಲಿ "ಬಾಲ ಮೇಳ " ಕಾರ್ಯಕ್ರಮ ಸಂಪನ್ನ