ತಾಲೂಕಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಶಾಂತಿಕಾಂಬಾ ಪ್ರೌಢಶಾಲೆ ಹೆಗಡೆಯಲ್ಲಿ ನಡೆಯಿತು.


ವಿಜ್ಞಾನ ವಸ್ತುಪ್ರದರ್ಶನದಲ್ಲಿ ಸೆಕೆಂಡರಿ ಹೈಸ್ಕೂಲ್ ವಿದ್ಯಾರ್ಥಿಗಳಾದ ಸನಿದ ಎಂ ನಾಯಕ ಮತ್ತು ನಚಿತ ಸಿ ಅಂಬಿಗ ಸಂಪನ್ಮೂಲ ನಿರ್ವಹಣೆ ಎಂಬ ಉಪವಿಷಯದಲ್ಲಿ ತಯಾರಿಸಿದ ಮಾದರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ. ಹಾಗೂ ಸುಹಾಸ ಕೃಷ್ಣ ಶೆಟ್ಟಿ ಮತ್ತು ಶಬರೀಶ ಪಟಗಾರ ಇವರು ಕೈಗಾರಿಕೆ ಅಭಿವೃದ್ಧಿ ಎಂಬ ಉಪವಿಷಯದಲ್ಲಿ ತಯಾರಿಸಿದ ಮಾದರಿ ತೃತೀಯ ಸ್ಥಾನ ಪಡೆದಿದೆ.

RELATED ARTICLES  ಅನಂತ ಕುಮಾರ್ ಹೆಗಡೆ ಯವರನ್ನ ಸಂಸದರನ್ನಾಗಿ ಆಯ್ಕೆ ಮಾಡಬೇಕು : ದಿನಕರ ‌ಶೆಟ್ಟಿ


ಈ ಹಿಂದೆಯೂ ಹೈಸ್ಕೂಲಿನ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಕ ಮಹಾದೇವ ಬೊಮ್ಮು ಗೌಡ ಇವರ ಮಾರ್ಗದರ್ಶನದಲ್ಲಿ ರಾಜ್ಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ, ಕಾರ್ಯದರ್ಶಿ ಮೋಹನ ಬಿ.ನಾಯಕ, ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಆಶ್ರಯ ಫೌಂಡೇಶನ್ ಅಧ್ಯಕ್ಷರಾದ ರಾಜೀವ ಗಾಂವಕರ, ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರು, ಸ್ಪಂದನ ಫೌಂಡೇಶನ್‍ನ ಎನ್. ರಾಮು ಹೀರೆಗುತ್ತಿ, ಊರನಾಗರಿಕರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭಹಾರೈಸಿದರು.

RELATED ARTICLES  ಮಲ್ಲಾಪುರದಲ್ಲಿ ನಡೆದ ಮೆಗಾ ಆಯುರ್ವೇದೀಯ ಕ್ಯಾಂಪ್


ವರದಿ: ಎನ್ ರಾಮು ಹಿರೇಗುತ್ತಿ