ಕಾರವಾರ: ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಸಾಕ್ರು ಟಕ್ಕು ಹುಂಬೆ ಈತನನ್ನು ಕಾರವಾರದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಅತ್ಯಾಚಾರ ಪ್ರಕರಣದ ಅಡಿ ದೋಷಿ ಅಂತಾ ಸಾಬೀತಾದ ಹಿನ್ನೆಲೆಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 60,000 ದಂಡ ವಿಧಿಸಿ ಇಂದು ತೀರ್ಪು ನೀಡಿದೆ.

ಯಲ್ಲಾಪುರ ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಹೊಸಳ್ಳಿ ಗ್ರಾಮದಲ್ಲಿ ಆರೋಪಿತನು 17 ವರ್ಷ ಪ್ರಾಯದ ಬಾಲಕಿಯನ್ನು ಮನೆಗೆ ಕರೆಯಿಸಿಕೊಂಡು ಬಲಾತ್ಕಾರ ವಾಗಿ ದೈಹಿಕ ಸಂಭೋಗ ಮಾಡಿ ಗರ್ಭಿಣಿಯಾಗಲು ಕಾರಣವಾದ ಅಪರಾಧದ ಮೇಲೆ ಯಲ್ಲಾಪುರ ಪಿ.ಎಸ್.ಐ.ಗಳಾದ ವಿಜಯ ಬಿರಾದಾರ ಹಾಗೂ ಶ್ರೀಧರ ಎಸ್.ಆರ್. ತನಿಖೆ ನಡೆಸಿ ಐ.ಪಿ.ಸಿ. ಕಲಂ 376 (2) (ಎನ್), ಮತ್ತು ಕಲಂ-5(ಐ) ಮತ್ತು 6 ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ್ದರು.

RELATED ARTICLES  ಕುಮಟಾದ ಸಮೀಪ ಪತ್ತೆಯಾಯ್ತು ಹಳೆಯ ಕಾಲದ ಗುಹೆ.

ಸುಧೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ 376 (2) (ಎನ್) ರ ಅಡಿಯಲ್ಲಿ 7 ವರ್ಷ ಜೈಲುಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿದ್ದು, ತಪ್ಪಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅದರಂತೆ ಪೋಕ್ಸೋ ಕಾಯಿದೆ ಕಲಂ: ಕಲಂ-5(ಐ) ಮತ್ತು 6 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ ರೂ. 30,000 ದಂಡ ವಿಧಿಸಿದ್ದು, ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷಿ ವಿಧಿಸಿದ್ದು, ಪ್ರಕಟವಾದ ಎರಡೂ ಶಿಕ್ಷೆಗಳು ಒಟ್ಟಾತ್ರಯಲ್ಲಿ ಜಾರಿಗೆ ಬರುವಂತೆ ಆದೇಶಿಸಿದ್ದಲ್ಲದೇ, ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ ರೂ. 50,000 ವನ್ನು ಪರಿಹಾರ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ

RELATED ARTICLES  ಎಪ್ರಿಲ್ 15 ರಂದು ಶನಿವಾರ ಕುಮಟಾದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಕೊಂಕಣಿ ನಾಟಕ " ಗಾಂಟಿ " ಪ್ರದರ್ಶನ.