ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಅಥವಾ ಶ್ರೀಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ತನಿಖೆಯಿಂದ ಹಿಂದೆ ಸರಿದಾಗಲೆಲ್ಲ, ಅವರ ಮೇಲೆ ಶ್ರೀಮಠದ ಪ್ರತಿವಾದಿಗಳು ಒತ್ತಡ ತಂದಿದ್ದಾರೆಯೇ ವಿನಃ ಶ್ರೀಮಠ ಯಾವುದೇ ಒತ್ತಡ ತಂದಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠ ಸ್ಪಷ್ಟಪಡಿಸಿದೆ.


ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಅಥವಾ ಪ್ರಸ್ತುತ ನ್ಯಾಯಮೂರ್ತಿಗಳಾಗಿರುವ  ಮೋಹನ ಶಾಂತನಗೌಡರ ಮತ್ತು ಫಣೀಂದ್ರ ವಿರುದ್ಧ ಪ್ರತಿವಾದಿಗಳು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು; ಫಣೀಂದ್ರ ಅವರ ಮೇಲಂತೂ ಸುಪ್ರೀಂಕೋರ್ಟ್, ರಾಷ್ಟ್ರಪತಿಗಳಿಗೆ ಕೂಡಾ ಪ್ರತಿವಾದಿಗಳು ದೂರು ನೀಡಿದ ನಿದರ್ಶನಗಳು ಕಣ್ಣ ಮುಂದಿವೆ ಎಂದು ಪ್ರಕಟಣೆ ಹೇಳಿದೆ.
ಉಳಿದಂತೆ ಕೆಲ ನ್ಯಾಯಮೂರ್ತಿಗಳು ಶ್ರೀಮಠದ ಶಿಷ್ಯ-ಭಕ್ತರು ಎಂಬ ಕಾರಣಕ್ಕೆ ಹಿಂದೆ ಸರಿದಿದ್ದರು. ಕೆಲವರು ವೈಯಕ್ತಿಕ ಕಾರಣಗಳಿಂದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಎಸ್‍ಪಿಪಿ ಆಗಿದ್ದ ಸಂದರ್ಭದಲ್ಲಿ ಶ್ರೀಮಠದ ವಿರುದ್ಧ ದಾವೆ ತಯಾರಿಸಿ ವಾದಿಸಿದ್ದ ಕಾರಣಕ್ಕಾಗಿ ನ್ಯಾಯಮೂರ್ತಿ ನವಾಜ್ ವಿಚಾರಣೆಯಿಂದ ಹಿಂದೆ ಸರಿದಿರಬಹುದು ಎಂದು ಪ್ರಕಟಣೆ ವಿವರಿಸಿದೆ.

RELATED ARTICLES  ರಾಹುಲ್ ಪಟ್ಟಾಭಿಷೇಕಕ್ಕೆ ಅಕ್ಟೋಬರ್ 30 ಕ್ಕೆ ಮುಹೂರ್ತ ನಿಗದಿಯಾಗಿದೆ !