ಕೆಲ ದಿನಗಳ ಹಿಂದೆ ಖಾಸಗಿ ಕಛೇರಿಗೆ ಭಟ್ಕಳ ಕೂಲಿ ಕಾರ್ಮಿಕರ ಸಂಘ (ರಿ) ನಿಯೋಗವು ಭೇಟಿ ನೀಡಿ, ಭಟ್ಕಳ ತಾಲ್ಲೂಕಿನಲ್ಲಿ ಕಳೆದ 3 ವರ್ಷದಿಂದ ಯಾವುದೇ ಕೂಲಿ ಕಾರ್ಮಿಕರ ಖಾಯಂ ಅಧಿಕಾರಿಗಳ ನೇಮಕಾತಿ ಆಗದಿರುವುದರಿಂದ ಬಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳಾದ ಮದುವೆ ಸಹಾಯ ಧನ, ವೈದ್ಯಕೀಯ ಸಹಾಯ ಧನ ಹೀಗೆ ಹಲವು ಸೌಲಭ್ಯಗಳಿಂದ ವಂಚಿತರಾಗಿ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂಬ ಮನವಿಯನ್ನು ಶಾಸಕ ಸುನೀಲ್ ನಾಯ್ಕ ಅವರಿಗೆ ನೀಡಿದರು.
ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು ಕಾರ್ಮಿಕ ಸಂಘದ ಪದಾಧಿಕಾರಿಗಳೊಂದಿಗೆ ಬೆಂಗಳೂರಿನ ವಿಕಾಸ ಸೌಧದಲ್ಲಿರುವ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ, ಶೀಘ್ರವೇ ಅಗತ್ಯವಿರುವ ಹುದ್ದೆಯನ್ನು ನೇಮಕಗೋಳಿಸುವಂತೆ ಶಾಸಕರು ಕೋರಿದ್ದಾರೆ.
ತಕ್ಷಣ ಸ್ಪಂದಿಸಿದ ಕಾರ್ಯದರ್ಶಿಗಳಾದ ಮಣಿವಣನ್ ಅವರು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಮತ್ತು ಇಲಾಖೆಯಲ್ಲಿರುವ ಅಧಿಕಾರಿಗಳಿಗೆ ಅಗತ್ಯ ಕ್ರಮವನ್ನು ಜರುಗಿಸಿವಂತೆ ತಾಕೀತು ಮಾಡಿದರು ಎನ್ನಲಾಗಿದೆ.