ಕುಮಟಾ ದಿಂದ ಹೆಗಡೆಗೆ ಹೋಗುವ ಮುಖ್ಯ ರಸ್ತೆ ಯಲ್ಲಿ ರೈಲ್ವೆ ಗೇಟ್ ಹಾಕುವುದರಿಂದ ದಿನದ 24 ಗಂಟೆ ಕೂಡ ವಾಹನ ಸವಾರರು ತುಂಬಾ ಕಿರಿ ಕಿರಿ ಅನಭವಿಸುತ್ತಿದ್ದು ಆ ರೈಲ್ವೆ ಗೇಟ್ ಮೇಲ್ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿ ನಮಗೆ ಅನುಕೂಲ ಮಾಡಿಕೊಡುವಂತೆ ಸಂಸದರಿಗೆ ಹೆಗಡೆ ಗ್ರಾಮಸ್ಥರಿಂದ ಮನವಿ ಸಲ್ಲಿಸಲಾಯಿತು..


ಇದಕ್ಕೆ ಸ್ಪಂದಿಸಿದ ಸಂಸದರು ಈ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಅದರ ಸಂಪೂರ್ಣ ವರದಿ ಕಳುಹಿಸಬೇಕು ಜೊತೆಗೆ ರಾಜ್ಯ ಸರ್ಕಾರ ಅದಕ್ಕೆ ತಗಲುವ ವೆಚ್ಚದ ಅರ್ಧ ಹಣವನ್ನು ನೀಡಬೇಕಾಗುತ್ತದೆ ಕೇಂದ್ರದಿಂದ ಅರ್ಧ ಹಣವನ್ನು ಕೊಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು..

RELATED ARTICLES  ಜನರಿಗೆ ನಂಬಿಸಿ ಪಂಗನಾಮ ಹಾಕುತ್ತಿದ್ದವ ಪೊಲೀಸ್ ಬಲೆಗೆ : ಜನರೇ ಹುಷಾರ್


ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದ ದಿನಕರ ಶೆಟ್ಟಿ ಯವರು ಮತ್ತು ಎ ಪಿ ಎಮ್ ಸಿ ಅಧ್ಯಕ್ಷ ಧೀರೂ ಶಾನಭಾಗ ರವರು ಅದರ ಸಂಪೂರ್ಣ ವಿವರ ಸಂಸದರಿಗೆ ನೀಡಿದರು.. ನಂತರ ಶಾಸಕರು ಸರ್ಕಾರ ದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು..
ಈ ಸಂದರ್ಭದಲ್ಲಿ ವಿನೋದ ಪ್ರಭು, ವೆಂಕಟೇಶ ನಾಯ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಟಗಾರ, ಗಜಾನನ ಗುನಗ, ಎನ್ ವಿ ನಾಯ್ಕ, ಪವನ ಪ್ರಭು ಉಪಸ್ಥಿತರಿದ್ದರು.

RELATED ARTICLES  ಕಾರುಗಳ ನಡಯವೆ ಮುಖಾಮುಖಿ ಡಿಕ್ಕಿ..!


ಇದೇ ತಿಂಗಳ ಕೊಂಕಣ ರೈಲ್ವೆ ಅಧಿಕಾರಿಗಳ ಸಭೆ ಕರೆದಿದ್ದು ಅದರಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೈಸುತ್ತೇನೆಂದು ಸಂಸದರು ತಿಳಿಸಿದರು.