ಕಲಭಾಗ ಮತ್ತು ಕೆರೆಮನೆ ಖ್ಯಾತ ಕಲಾ ಕುಟುಂಬಗಳ ಸೇತುವಾಗಿದ್ದ ಇವರು ಅಳಕೆಯಲ್ಲಿ ಗಣಿತ ಶಿಕ್ಷಕರಾಗಿ ಖ್ಯಾತಿಗಳಿಸಿ ನಿವೃತ್ತರಾಗಿ ಕೆರೆಮನೆಯಲ್ಲಿ ನೆಲೆಸಿದ್ದರು. ಯಕ್ಷಗಾನ ಭಾಗವತಿಕೆ, ವೇಷ, ಹಿಂದುಸ್ತಾನಿ ಸಂಗೀತದಲ್ಲಿ ಸಕ್ರೀಯರಾಗಿದ್ದ ಇವರು 67ನೇ ವಯಸ್ಸಿನಲ್ಲಿ ಮೆದುಳಿನ ಆಘಾತದಿಂದ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ದಿನಾಂಕ 18ರಂದು 10-30ಕ್ಕೆ ಹೃದಯ ಸ್ತಂಭನದಿಂದ ದೈಹಿಕವಾಗಿ ಇಲ್ಲವಾಗಿದ್ದಾರೆ. ತಂದೆ ಮಹಾಬಲ ಹೆಗಡೆಯವರ 10ನೇ ವಾರ್ಷಿಕ ಸ್ಮರಣೆಯ ಸಿದ್ಧತೆಯಲ್ಲಿದ್ದರು.

RELATED ARTICLES  ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದ ಪರಿಹಾರ ವಿತರಿಸಿದ ಶಾಸಕ ಸುನೀಲ್ ನಾಯ್ಕ.


ಇವರು ಖ್ಯಾತ ಕಲಾ ಪೋಷಕರಾಗಿದ್ದ ಕಲಭಾಗ ಗೋವಿಂದ ಹೆಗಡೆಯವರ ಮಗಳು ನಾಗವೇಣಿಯ ಪತಿ. ಒಬ್ಬ ಮಗ ಅಮೆರಿಕಾದಲ್ಲಿ, ಇನ್ನೊಬ್ಬ ಬೆಂಗಳೂರಿನಲ್ಲಿ ಇದ್ದಾರೆ. ಇವರ ಸಹೋದರಿ ಲಲಿತಾ ಪಂ. ಪರಮೇಶ್ವರ ಹೆಗಡೆ ಇವರ ಪತ್ನಿ. ಕಳೆದ ತಿಂಗಳು ಅಮೆರಿಕಾದಲ್ಲಿ ಭಾಗವತಿಕೆ ಮಾಡಿ, ಮಗನನ್ನು ಕುಣಿಸಿ ಬಂದಿದ್ದರು. ಕಲಭಾಗ ವಿನಾಯಕ ಹೆಗಡೆ ಮೃದಂಗ ಸಾಥ್ ನೀಡಿದ್ದರು. ಕಲಾವಿದರಿಗೆ ಸಾವಿಲ್ಲ, ಅವರು ಬಿಟ್ಟು ಹೋಗುವ ನೆನಪುಗಳಿಗೆ ಕೊನೆಯಿಲ್ಲ.

RELATED ARTICLES  ಕುಮಟಾ-ಹೊನ್ನಾವರ ಕ್ಷೇತ್ರಕ್ಕೆ ಹೊಸ ತಂತ್ರ ಹೆಣೆಯಲು ಸಿದ್ಧವಾಯ್ತಾ ಬಿಜೆಪಿ?