ಕುಮಟಾ: ವನ್ನಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬಾಡ ವಲಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿ ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ.

ಕನ್ನಡ, ಹಿಂದಿ, ಸಂಸ್ಕøತ, ಮರಾಠಿ, ತುಳು ಭಾಷಣ ಸ್ಪರ್ಧೆಗಳಲ್ಲಿ ಕ್ರಮವಾಗಿ ರಕ್ಷಿತಾ ಪಟಗಾರ, ಗೌಸಿಯಾ ಮುಕ್ತಿಯಾರ್ ಸಾಬ್, ಮುಕ್ತಾ ಭಟ್ಟ, ಜ್ಯೋತಿ ಪಟಗಾರ, ತನುಜಾ ನಾಯ್ಕ ಆಯ್ಕೆಯಾದರೆ, ಸಂಸ್ಕøತ ಧಾರ್ಮಿಕ ಪಠಣದಲ್ಲಿ ಸಾತ್ವಿಕ ಭಟ್ಟ, ಜಾನಪದ ಗೀತೆ -ತೇಜಾ ಹರಿಕಾಂತ, ಭಾವಗೀತೆ -ಪ್ರಜ್ಞಾ ಆಚಾರಿ, ಭರತನಾಟ್ಯ-ಹರ್ಷಿತಾ ನಾಯ್ಕ, ಆಶು ಭಾಷಣ -ಲಕ್ಷ್ಮೀಧರ ಗೌಡ, ಮಿಮಿಕ್ರಿಯಲ್ಲಿ ದರ್ಶನ ನಾಯ್ಕ ಹಾಗೂ ಸಾಮೂಹಿಕ ವಿಭಾಗವಾದ ನೃತ್ಯ ಮತ್ತು ಸಂಗೀತ ಕಲೋತ್ಸವಗಳೆರಡರಲ್ಲೂ ರಕ್ಷಿತಾ ಪಟಗಾರ ಮತ್ತು ಸಂಗಡಿಗರು ಮೊದಲ ಸ್ಥಾನಗಳಿಸಿದ್ದಾರೆ. ಚಿತ್ರಕಲೆಯಲ್ಲಿ ಪ್ರಜ್ಞಾ ಆಚಾರಿ ತಂಡವೂ ಗೆದ್ದಿದೆ.

RELATED ARTICLES  ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭ ಜು.31ಕ್ಕೆ