ಉತ್ತರ ಕನ್ನಡದಾದ್ಯಂತ ಜನರ ಜೀವ ರಕ್ಷಣೆಗಾಗಿ ಹೆಲ್ಮೇಟ್ ಹಾಕದೇ ಇರುವವರ ಮೇಲೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಆದರೂ ವಾಹನ ಸವಾರರು ನಿರ್ಲಕ್ಷಿಸುತ್ತಿದ್ದಾರೆ.
ಜನರು ಗೊತ್ತಿಲ್ಲದೇ ಅಥವಾ ನಮ್ಮನ್ನು ಯಾರೂ ನೋಡಿಲ್ಲ ಎಂದು ಹೆಲ್ಮೇಟ್ ಹಾಕದೇ ಅಥವಾ ತ್ರಿಬಲ್ ರೈಡ್ ಹೊಡೆದುಕೊಂಡು ಮನೆಗೆ ಅಥವಾ ತಮ್ಮ ತಮ್ಮ ಕೆಲಸಕ್ಕೆ ಹೋಗಬಹುದು.ಆದರೆ ಹೈವೆ ಪಟ್ರೋಲ್ ಅಥವಾ ಇಂಟರ್ ಶಾಪ್ಟ ಗಾಡಿಗಳು ಮತ್ತು ಸಿಟಿಯಲ್ಲಿ ಅಳವಡಿಸಿರುವ ಕ್ಯಾಮರಾಗಳಲ್ಲಿ ನಿಮ್ಮ ನಂ ಗಮನಿಸಿ ನೋಟ್ ಆದರೆ ಮೇಲೆ ತೋರಿಸಿರುವ ರೀತಿಯ ಪೈನ್ (ಇದು ಹಳೆಯ ಪೈನ್ ಆಗಿರುತ್ತದೆ) ನಿಮ್ಮ ಮನೆ ಬಾಗಿಲಿಗೆ ಬರಲಿದೆ.ಈ ರೀತಿಯ ಪೈನ್ ಗಳು ತಿಂಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಒಂದು ತಾಲೂಕಿನಲ್ಲಿ 500 ಕ್ಕೂ ಹೆಚ್ಚು ಕೇಸ್ ಗಳು ಮನೆ ಬಾಗಿಲಿಗೆ ಬರುತ್ತಿದ್ದು, ಬೈಕ್ ಸವಾರರ ಮೇಲೆ ಹೆಚ್ಚು ಕೇಸ್ ಗಳು ದಾಖಲಾಗುತ್ತಿವೆ.ಒಂದು ವೇಳೆ ಈ ರೀತಿಯ ಕೇಸ್ ಗಳು ದಾಖಲಾದರೆ ನಿವು ಆ ಸಮಯದಲ್ಲಿ ತುಂಬದೇ ಹೋದರೆ ಕೋರ್ಟ ನಿಂದ ನೋಟೀಸ್ ಬರುವ ಸಾದ್ಯತೆ ಇರುತ್ತದೆ.ಮತ್ತು ಕೋರ್ಟಿನಲ್ಲಿ ತುಂಬಲು ಹೋದರೆ ಒಂದಿ ದಿನ ಅಲ್ಲಿಯೇ ಕಳೆಯಬೇಕಾದ ಸಾದ್ಯತೆ ಇರುತ್ತದೆ.
ಮೋದಲು ಹೆಲ್ಮೇಟ್ ಇಲ್ಲದೇ ಅಥವಾ ಬೇರೇನೋ ಕೇಸ್ ಗಳು ಬಿದ್ದರೆ 100 ರೂ ಪೈನ್ ತುಂಬಿ ಹೋಗುವುದು ಕೊಮನ್ ಆಗಿತ್ತು.ಆದರೆ ಹೊಸದಾಗಿ ಪರಿಸ್ಕರಣೆ ಆಗಿರುವ ಟ್ರಾಪಿಕ್ ಪೈನ್ ನಲ್ಲಿ ಒಂದು ಕೇಸ್ ಬಿತ್ತೆಂದರೆ ಬರೊಬ್ಬರಿ ಹಳ್ಳಿಯ ದುಡಿಮೆಗೆ ಹೋಲಿಸಿದರೆ ಒಂದು ತಿಂಗಳ ದುಡಿಮೆ ಪೈನ್ ಕಟ್ಟಲೆಂದೇ ತೆಗೆದಿಡಬೇಕಾಗುತ್ತದೆ.
ಈಗಾಗಗೇ ಜನರಿಗೆ ತಿಳಿಸಲು ಉತ್ತರಕನ್ನಡ ಜಿಲ್ಲಾ ಪೋಲೀಸ್ ಇಲಾಖೆ ಹಲವು ಪ್ರಯತ್ನ ಮಾಡಿದ್ದು , ಖಡ್ಡಾಯವಾಗಿ ಹೆಲ್ಮೇಟ್ ದರಿಸುವಂತೆ ಮನವಿ ಮಾಡಿಕೊಂಡಿದೆ, ನಿಯಮ ಉಲ್ಲಂಗನೆ ಮಾಡಿದರೆ ನಿಮ್ಮ ಮನೆಬಾಗಿಲಿಗೆ ಪೈನ್ ಬರಲಿದೆ, ಮತ್ತು ಯಾವುದೇ ನಿರ್ದಾಕ್ಷಣ್ಯವಿಲ್ಲದೇ ಕೇಸ್ ದಾಖಲಿಸಲಾಗುವುದು ಎಂಬ ಮಾಹಿತಿ ನೀಡಿದೆ ಎನ್ನಲಾಗುತ್ತಿದೆ.
ಹೆಚ್ಚೆಂದರೆ isi ಮುದ್ರೆ ಹೊಂದಿದ ಹೆಲ್ಮೇಟ್ ಗೆ 700-800 ಇರಬಹುದು.ಹೆಲ್ಮೇಟ್ ಇಲ್ಲದೇ ನಿವು ಗಾಡಿ ಓಡಿಸಿ ಸಿಕ್ಕಾಕಿಕೊಂಡ್ರೆ 1000 ರೂ ಪೈನ್ ಕಟ್ಟಬೇಕಾಗುತ್ತದೆ.
ಹೆಲ್ಮೇಟ್ ಖಡ್ಡಾಯ ಇರುವುದು ನಿಮ್ಮ ಜೀವದ ಸುರಕ್ಷತೆಗಾಗಿ. ಯಾರಮೇಲೂ ಉದ್ದೇಶ ಪೂರ್ವಕವಾಗಿ ಕೇಸ್ ದಾಖಲಿಸುವುದಿಲ್ಲ.ನಿಮ್ಮ ಸುರಕ್ಷತೆಗಾಗಿ ಖಡ್ಡಾಯವಾಗಿ ಹೆಲ್ಮೇಟ್ ದರಿಸಿ.ಹೆಲ್ಮೇಟ್ ಹಾಕಿದ ಗಾಡಿಗಳನ್ನು ಪೋಲೀಸರು ತಡೆಹಿಡಿಯುವುದಿಲ್ಲ.ಒಂದುವೇಳೆ ಹೆಲ್ಮೇಟ್ ಹಾಕಿದ್ದರು,ಅವರಿಗೆ ನಿಮ್ಮ ವಾಹನದ ಮೇಲೆ ಅನುಮಾನ ಬಂದಿರೆ ಮಾತ್ರ ವಾಹನಗಳ ದಾಖಲೆ ಪತ್ರಗಳನ್ನು ಪರಿಶೀಲಿಸಲಾಗುವುದು.ಸಾರ್ವಜನರಿಕರು ಖಡ್ಡಾಯವಾಗಿ ನಿಯಮ ಪಾಲಿಸಿ ಮತ್ತು ನಿಮ್ಮ ಸುರಕ್ಷತೆಗಾಗಿ ಹೆಲ್ಮೇಟ್ ಕಡ್ಡಾಯವಾಗಿ ಧರಿಸಿ.