ಶಿರಸಿ : ಇನ್ನೇನು ಮಳೆಗಾಲ ಮುಗಿಯಿತು ಎಂದುಕೊಂಡರೆ ಮತ್ತೆ ಆಗಾಗ ಧೋ ಎಂದು ಸುರಿಯುತ್ತಿರುವ ರಭಸದ ಮಳೆಗೆ ಜನ ಕಂಗಾಲಾಗಿದ್ದು ವಿವಿಧೆಡೆ ನಷ್ಟದ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶದ ಶಿರಸಿ ಸಿದ್ದಾಪುರ ಯಲ್ಲಾಪುರ ಸೇರಿದಂತೆ ವಿವಿಧೆಡೆಗಳಲ್ಲಿಸಾಕಷ್ಟು ಮಳೆ ಸುರಿಯುತ್ತ ಜನರು ತತ್ತರಿಸುವಂತೆ ಮಾಡಿದೆ. ಜೊತೆಗೆ ಕರಾವಳಿ ತಾಲೂಕುಗಳಾದ ಹೊನ್ನಾವರ, ಕುಮಟಾ,ಅಂಕೋಲಾ ಭಾಗದಲ್ಲಿಯೂ ಮಳೆ ಹಾಗೂ ಕೊಳೆ ಪ್ರಮಾಣ ಹೆಚ್ಚಿದೆ.
ಈ ಮಧ್ಯೆ, ಈಗ ಸುರಿಯುತ್ತಿರುವ ಜೋರಾದ ಮಳೆಯು ಅಡಕೆ ಬೆಳೆಗಾರರನ್ನು ಹೆಚ್ಚು ಚಿಂತೆಗೆ ದೂಡುತ್ತಿದೆ. ಮೊದಲೇ ಅಡಕೆ ಕೊಳೆಯ ಆತಂಕದಲ್ಲಿರುವ ಬೆಳೆಗಾರರು ಈಗ ಮತ್ತಷ್ಟು ರಭಸದ ಮಳೆ ಸುರಿಯುತ್ತಿರುವುದರಿಂದ ಕೊಳೆ ರೋಗ ಇನ್ನಷ್ಟು ವ್ಯಾಪಿಸಬಹುದು ಎಂಬ ಆತಂಕದಲ್ಲಿದ್ದಾರೆ.. ಬೋರ್ಡೋ ದ್ರಾವಣ ಸಿಂಪರಣೆ ಮಾಡಿದರೂ ಕೊಳೆ ಬಂದಿದೆ. ಬೆಳೆಗಾರರು ಕಂಗಾಲಾಗಿದ್ದು, ಅಡಿಕೆಗೆ ವಿಶೆಷ ಪ್ಯಾಕೇಜ್ ಒದಗಿಸಲು ವಿಧಾನ ಸಭೆಯ ಅಧ್ಯಕ್ಷರು ಸರಕಾರಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.