ಕುಮಟಾ ತಾಲೂಕಿನ ಹೊಲನಗದ್ದೆಯ ಹವ್ಯಕ ಸಭಾಭವನದಲ್ಲಿ ಶುಕ್ರವಾರದಂದು ಹವ್ಯಕ ಸಮಾಜ ಸೇವಾ ಸಂಘ(ರಿ) ಕಾಂಚಿಕಾಂಬಾ ವಲಯ ಗುಡೇಅಂಗಡಿ ಕುಮಟಾ ಇವರ ಆಶ್ರಯದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣಾಭಿವೃದ್ಧಿ ಟೃಸ್ಸ್ಟ್ ಉಪ್ಲೆ ಹೊನ್ನಾವರ ಅರ್ಪಿಸುವ ಅಪರಂಜಿ ಕಡತೋಕಾ ವಿರಚಿತ,ಅಹಿಚ್ಛತ್ರ ನಾಟಕ ತಂಡದವರಿಂದ ಮಾಧ್ಯಮಗೋಷ್ಠಿ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಹವ್ಯಕ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಆರ್.ಎನ್ ಹೆಗಡೆ,ಸಪ್ಟೆಂಬರ್ ೨೨ ರವಿವಾರದಂದು ಹೊಲನಗದ್ದೆಯ ಹವ್ಯಕ ಸಭಾಭವನದಲ್ಲಿ ಸಂಜೆ ೬.೩೦ ರಿಂದ ಅಹಿಚ್ಛತ್ರ ನಾಟಕ ಪ್ರಾರಂಭವಾಗಲಿದೆ,ಈ ನಾಟಕದಲ್ಲಿ ಸಮಾಜದಲ್ಲಿ ಈ ಹಿಂದೆ ಹವ್ಯಕರು ನಡೆದು ಬಂದ ಹಾದಿಯ ಕುರಿತು ಉಲ್ಲೇಖಿಸಲಾಗಿದೆ.ಜೊತೆಗೆ ದೃಶ್ಯ ರೂಪಕವಾಗಿ ಜನರ ಮುಂದೆ ಬರಲಿದೆ ಎಂದರು.ನಂತರ ರವೀಂದ್ರ ಭಟ್ ಸೂರಿ ಮಾತನಾಡಿ ಹವ್ಯಕರ ಮೂಲ ಹಾಗೂ ಈ ಹಿಂದಿನ ಅವರ ಆಚಾರ,ವಿಚಾರ ಸೇರಿದಂತೆ ಅನೇಕ ವಿಷಯಗಳನ್ನ ಹೊತ್ತು ನಿಮ್ಮ ಮುಂದೆ ಬರಲಿದೆ.ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ನಮ್ಮ ತಂಡಕ್ಕೆ ಪ್ರೋತ್ಸಾಹಿಸಬೇಕೆಂದು ವಿನಂತಿಸಿಕೊಂಡರು.

RELATED ARTICLES  ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಗತಿವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ಉತ್ತಮ‌ ಸಾಧನೆ .

ಉತ್ತರ ಪ್ರದೇಶದ ಈಗಿನ ರಾಯಬರೆಲಿಯ ಹತ್ತಿರ ಇರುವ ಊರೇ “ಅಹಿಚ್ಛತ್ರ”. ಇಲ್ಲಿನ ಮಣ್ಣಿನಿಂದ ಹಿಡಿದು,ಇತಿಹಾಸದ ವರೆಗೂ ಪ್ರತಿಯೊಂದು ವಿಷಯವೂ ವೈಶಿಷ್ಟ್ಯಪೂರ್ಣ. ಅಹಿ ಎಂದರೆ ಸಂಸ್ಕೃತದಲ್ಲಿ ಸರ್ಪ, ಛತ್ರ ಎಂದರೆ ಕೊಡೆ ಅಥವಾ ನೆರಳು. ಪುರಾಣ ಕಾಲದಿಂದಲೂ ಅಸ್ಥಿತ್ವದಲ್ಲಿರುವ ಊರಿದು.ಸುಮಾರು ೧೫೦೦ ವರ್ಷಗಳ ಹಿಂದೆ ಈಗಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬರ ರಾಜ ಮಯೂರವರ್ಮ(ಶರ್ಮ)ನ ಆಮಂತ್ರಣದ ಮೇರೆಗೆ ಸುಮಾರು ೨೫೦೦ ಕಿ.ಮಿ.ಗಳಷ್ಟು ದೂರದ ಅಹಿಚ್ಛತ್ರದಿಂದ ಕಾಲ್ನಡಿಗೆಯಲ್ಲಿ ೭ ಗೋತ್ರದ ೩೨ ಕುಟುಂಬಗಳು ಹೊನ್ನಾವರದ ಇಡಾಕುಂಜ ಅಂದರೆ ಇಡಗುಂಜಿಗೆ ಪ್ರಥಮವಾಗಿ ಆಗಿಮಿಸಿ, ಹಾಗೆಯೆ ಹೊನ್ನಾವರ- ಗೇರುಸೊಪ್ಪಾ ಮಾರ್ಗ ಮಧ್ಯದಲ್ಲಿರುವ ” ಹೈಗುಂದ” ನಡುಗಡ್ಡೆಯಲ್ಲಿ ಸುಧೀರ್ಗ ಅವಧಿಗಳ ಕಾಲ ಯಾಗ-ಯಜ್ಞಾದಿಗಳನ್ನ ಮಾಡಿ, ಈ ನಾಡಿಗೆ ಒಳಿತನ್ನ ಬಯಸುತ್ತಾರೆ.
ಆಗಿನ ಅಹಿಚ್ಛತ್ರದ ಬದುಕು, ಒಳಿತು ಕೆಡುಕುಗಳು, ಮನುಷ್ಯನಿಗೆ ಸಂಸ್ಕಾರ ಯಾಕೆ ಬೇಕು, ಸಂಸ್ಕಾನ ಹೀನನಾದರೆ ಏನಾಗುತ್ತದೆ, ಅಹಿಚ್ಛತ್ರದಿಂದ ಹೈಗುಂದದ ವರೆಗಿನ ಪ್ರಯಾಣದಲ್ಲಿ ಅನುಭವಿಸುವ ಕಷ್ಟಕಾರ್ಪಣ್ಯಗಳು, ವಂಶವಾಹಿನಿ ಎಂದರೇನು, ಅದರಿಂದಾಗುವ ಪರಿಣಾಮಗಳೇನು, ಎನ್ನುವುದನ್ನ ಒಂದು ಕಥೆಯಾಗಿ ನಾಟಕ ಹೇಳುತ್ತಾ ಹೋಗುತ್ತದೆ.

RELATED ARTICLES  ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ದಿನಕರ ಶೆಟ್ಟಿ.

ಪ್ರೇಕ್ಷಕರನ್ನ ೧೫೦೦ ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ.ಪೌರಾಣಿಕ,ಐತಿಹಾಸಿಕ,ಸಾಮಾಜಿಕ,ವೈಜ್ಞಾನಿಕ ಹಿನ್ನೆಲೆಯೊಂದಿಗೆ , ಅತ್ಯುತ್ತಮ ನಿರ್ದೇಶನ ಸಂಗೀತ, ದ್ವನಿ ಬೆಳಕು,ವಿಶಿಷ್ಟ ವಸ್ತ್ರ ವಿನ್ಯಾಸ, ರಂಗಸಜ್ಜಿಕೆಯೊಂದಿಗೆ,ಹಲವು ಅನುಭವಿ ಮತ್ತು ಯುವಕಲಾವಿದರ ತ್ಯಾಗ ಮತ್ತು ಪರಿಶ್ರಮವೇ ನಾಟಕ ಅಹಿಚ್ಛತ್ರ ಈ ನಾಟಕ.

ಮಾಧ್ಯಮಗೋಷ್ಠಿಯಲ್ಲಿ ಸತೀಶ ಭಟ್ ಉಳ್ಗೆರೆ,ಸುರೇಶ ಭಟ್ ಕಡತೋಕಾ,ಮಂಜುನಾಥ ಭಂಡಾರಿ,ಕೃಷ್ಣಾನಂದ ಭಟ್ ಉಪ್ಲೆ, ವಿ.ಡಿ ಹೆಗಡೆ, ಕೆ.ಆರ್ ಭಟ್,ಎಮ್.ಐ.ಭಟ್,ಪ್ರಸನ್ನ ಭಟ್ ಗೋಡಾಮಕ್ಕಿ,ರಾಮಚಂದ್ರ ಭಾಗ್ವತ್,ಎಸ್.ಐ.ಭಟ್,ಗಣೇಶ ಜೋಶಿ,ಸದಾನಂದ ಭಟ್,ಇನ್ನಿತರರು ಹಾಜರಿದ್ದರು.