ಕಾರವಾರ: ಭ್ರೂಣವೊಂದು ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಕಾರವಾರದ ಸದಾಶಿವಗಡದಲ್ಲಿ ಇಂದು ನಡೆದಿದೆ. ಸುಮಾರು ಐದಾರು ತಿಂಗಳ ಭ್ರೂಣ ಇದಾಗಿದ್ದು, ಇಂದು ಸದಾಶಿವಗಡದ ಹೆದ್ದಾರಿಯಂಚಿನ ಚರಂಡಿಯಲ್ಲಿ ಪತ್ತೆಯಾಗಿದೆ. ಮಹಿಳೆಯು ಗರ್ಭಪಾತ ಮಾಡಿಸಿರಬಹುದು, ಇಲ್ಲವೇ ಅವಧಿ ಪೂರ್ಣ ಜನಿಸಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಶಿರಸಿ ಸಿದ್ದಾಪುರ ಹೆದ್ದಾರಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನದ ನಾಲ್ಕನೇ ಹಂತ ಯಶಸ್ವಿ.