ಗುಜರಾತ್ ನ ಅಹ್ಮಮದಾಬಾದ ನಲ್ಲಿ ನಡೆದ
ರಾಷ್ಟ್ರಮಟ್ಟದ “ಯಂಗ್ ಸ್ಕಾಲರ್ ಮೆಡಿಸಿನ್ ಕ್ವಿಜ್”
ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ‘ಕಿಮ್ಸ್’ ಮೆಡಿಕಲ್
ಕಾಲೇಜಿನ ಡಾ. ಸುಮಂತ ಬಳಗಂಡಿ ದ್ವಿತೀಯ
ಸ್ಥಾನಗಳಿಸಿ ಪ್ರಶಸ್ತಿ ಪಡೆದು
ಸಾಧನೆಗೈಯ್ದಿದ್ದಾರೆ.


ದೇಶದ ಎಲ್ಲ ಮೆಡಿಕಲ್ ಕಾಲೇಜುಗಳ ಎಂ.ಡಿ.
ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಸಂಘಟಿಸುವ ಈ
ಸ್ಪರ್ಧೆಯ ಆರಂಭಿಕ ಹಂತದಲ್ಲಿ ಅಂತರ ರಾಜ್ಯ
ಮಟ್ಟದಲ್ಲಿ ಸ್ಪರ್ಧಿಸಿ ಆಯ್ಕೆಯಾದ ಡಾ.ಸುಮಂತ
ಬಳಗಂಡಿ ಅವರು ದಕ್ಷಿಣ ರಾಜ್ಯಗಳ ಮೆಡಿಕಲ್
ಕಾಲೇಜುಗಳನ್ನೊಳಗೊಂಡ ‘ಝೋನಲ್
ಲೆವೆಲ್’ ನಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ
ಸ್ಪರ್ಧೆಗೆ ಸ್ಪರ್ಧಿಸುವ ಅರ್ಹತೆ ಪಡೆದರು.
ಡೆಲ್ಲಿಯ ಪ್ರತಿಷ್ಠಿತ ‘ಎಮ್ಸ್’ ಮೆಡಿಕಲ್ ಕಾಲೇಜಿನ
ಸ್ಪರ್ಧಿ ಪ್ರಥಮ ಸ್ಥಾನ ಪಡೆದಿದ್ದು
ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿ
ಪ್ರಶಸ್ತಿ ಪಡೆದವರಲ್ಲಿ ಈವರೆಗೆ ಡಾ. ಸುಮಂತ
ಬಳಗಂಡಿ ಅವರು ನಮ್ಮ ರಾಜ್ಯದಲ್ಲಿಯೇ
ಮೊದಲಿಗರಾಗಿದ್ದು, ಇವರ ಸಾಧನೆ ನಮಗೂ – ನಮ್ಮ ಸಂಸ್ಥೆಗೂ ಹೆಮ್ಮೆಯೆನಿಸಿದೆ ಎಂದು
‘ಕಿಮ್ಸ್’ನ ಹಿರಿಯ ಉಪನ್ಯಾಸಕರುಗಳು ಹರ್ಷ
ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದ್ದಾರೆ.
ಬಾಲ್ಯದಿಂದಲೂ ಪ್ರತಿಭಾವಂತ
ವಿದ್ಯಾರ್ಥಿಯಾಗಿರುವ ಡಾ. ಸುಮಂತ ಅವರು
ಕುಮಟಾದ ಗುಡಿಗಾರಗಲ್ಲಿಯಲ್ಲಿನ ಸರಕಾರಿ
ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ
ಶಿಕ್ಷಣ ಪಡೆದವರಾಗಿರುತ್ತಾರೆ . ಕಾರವಾರದ ಹಿಂದೂ
ಹೈಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕಗಳಿಸಿ ದ.ಕ. ಜಿಲ್ಲೆಯ ಅಳಿಕೆಯಲ್ಲಿ ಪಿ.ಯೂ.ಸಿ. ಶಿಕ್ಷಣ ಪಡೆದಿದ್ದಾರೆ. ರಾಜ್ಯದ ಸಿ.ಇ.ಟಿ ಯಲ್ಲಿ ಉತ್ತಮ ರ್ಯಾಂಕ ಪಡೆದು ‘ಕಿಮ್ಸ್’ ಹುಬ್ಬಳ್ಳಿಯಲ್ಲಿ ಎಂ.ಬಿ.ಬಿ.ಎಸ್. ಪದವಿ ಮುಗಿಸಿ ನಂತರದ “ನೀಟ್” ಪರೀಕ್ಷೆಯಲ್ಲಿಯೂ ಉತ್ತಮ ರ್ಯಾಂಕ ಪಡೆದು ‘ಕಿಮ್ಸ್ ‘ನಲ್ಲಿಯೇ ಸ್ನಾತಕೋತ್ತರ ಪದವಿ ಎಂ.ಡಿ (ಜನರಲ್ ಮೆಡಿಸಿನ್) ಗೆ ಪ್ರವೇಶ ಪಡೆದಿದ್ದು ಪ್ರಸಕ್ತ ಸಾಲಿನಲ್ಲಿ ಎಂ.ಡಿ. ಅಂತಿಮ ವರ್ಷದ
ವಿದ್ಯಾರ್ಥಿಯಾಗಿದ್ದಾರೆ.

RELATED ARTICLES  ಪಿಒಪಿ, ಬಣ್ಣ ಲೇಪಿತ ವಿಗ್ರಹಗಳ ನಿಷೇಧ. ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಸೂಚನೆ


ಡಾ. ಸುಮಂತ ಬಳಗಂಡಿ ಇವರು ಮೂಲತಃ ಶಿರಸಿ
ತಾಲೂಕ ಮುಂಡಿಗೇಸರ ಗ್ರಾಮೀಣ ಪ್ರದೇಶದ
ಕೃಷಿ ಕುಟುಂಬದವರಾಗಿದ್ದು, ಹಾಲಿ ಕುಮಟಾ
ನಿವಾಸಿಗಳಾಗಿರುವ ಜಯದೇವ ಬಳಗಂಡಿ ಮತ್ತು
ಸ್ವಾತಿ ಬಳಗಂಡಿ ಇವರ ಸುಪುತ್ರರಾಗಿದ್ದಾರೆ.

RELATED ARTICLES  ಒಂದೂವರೆ ವರ್ಷ ಕಳೆದರೂ ಮಣ್ಣು ತೆರವಾಗಿಲ್ಲ : ಕಾಮಗಾರಿ ಬಗ್ಗೆ ಜನರ ಆಕ್ರೋಶ