ಕುಮಟಾ :ಮುರಾರ್ಜಿ ವಸತಿ ಶಾಲೆ ಹೆಗಡೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೆಣ್ಣುಮಕ್ಕಳ ಶಾಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಸ್ಪರ್ಧೆಗಳಲ್ಲಿ ವಿಜೇತ ರಾಗಿ ಕ್ಲಸ್ಟರ್ ಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಕಿರಿಯರ ವಿಭಾಗ: ದಿವ್ಯ ಜಿ ಗೌಡ ( ತುಳು ಕಂಠಪಾಠ ಪ್ರಥಮ), ಸಂಜನಾ ಡಿ ನಾಯ್ಕ (ಹಿಂದಿ ಕಂಠಪಾಠ ಪ್ರಥಮ, ಭಕ್ತಿ ಗೀತೆ ದ್ವಿತೀಯ), ರಕ್ಷಾ ಮತ್ತು ಸಂಜನಾ ( ಕ್ವಿಜ್ ಪ್ರಥಮ), ಮಾಲತಿ ಮುಕ್ರಿ ( ತಮಿಳು ಕಂಠಪಾಠ ಪ್ರಥಮ), ನಮ್ರತಾ ಪಟಗಾರ (ಮರಾಠಿ ಕಂಠಪಾಠ ಪ್ರಥಮ, ಅಭಿನಯ ಗೀತೆ ದ್ವಿತೀಯ) , ರಕ್ಷ ನಾಯ್ಕ ( ಆಶುಭಾಷಣ ದ್ವಿತೀಯ), ಅಕ್ಷತಾ ಶೇಟ್ ತೆಲಗು ಕಂಠಪಾಠ ದ್ವಿತೀಯ, ಶುಭಶ್ರೀ ಸಂಗಡಿಗರು (ಕವ್ವಾಲಿ ಪ್ರಥಮ)
ಹಿರಿಯರ ವಿಭಾಗ;ಸುಹಾಸಿನಿ ಜಿ ಪೈ (ಸಂಸ್ಕೃತ ಕಂಠಪಾಠ ಪ್ರಥಮ, ಧಾರ್ಮಿಕ ಪಠಣ ಪ್ರಥಮ), ಪ್ರತಿಕ್ಷ ನಾಯ್ಕ ( ಆಶುಭಾಷಣ ಪ್ರಥಮ), ಮಾನ್ಯ ನಾಯ್ಕ್ (ತಮಿಳು ಕಂಠಪಾಠ ಪ್ರಥಮ), ಭಾವನಾ ಪಟಗಾರ ಮತ್ತು ಸಂಗಡಿಗರು (ದೇಶಭಕ್ತಿ ಗೀತೆ ಪ್ರಥಮ), ಸೌಮ್ಯ ನಾಯ್ಕ ಮತ್ತು ಸಂಗಡಿಗರು (ಕೋಲಾಟ ಪ್ರಥಮ), ಸಿಂಚನ ಶೆಟ್ಟಿ ಮತ್ತು ಸಂಗಡಿಗರು (ಕವ್ವಾಲಿ ಪ್ರಥಮ), ಸುಹಾಸಿನಿ ಮತ್ತು ರೇವತಿ ಮುಕ್ರಿ (ಕ್ವಿಜ್ ದ್ವಿತೀಯ), ಸುಕನ್ಯಾ ಪಟಗಾರ್ (ಹಿಂದಿ ಕಂಠಪಾಠ ದ್ವಿತೀಯ), ರೇವತಿ ಮುಕ್ರಿ (ಮರಾಠಿ ಕಂಠಪಾಠ ದ್ವಿತೀಯ), ಭಾವನಾ ಪಟಗಾರ್ (ತುಳು ಕಂಠಪಾಠ ದ್ವಿತೀಯ), ಮೈತ್ರಿ ನಾಯ್ಕ (ಕೊಂಕಣಿ ಕಂಠಪಾಠ ದ್ವಿತೀಯ), ಸುಕನ್ಯಾ ಸಂಗಡಿಗರು (ಜಾನಪದ ನೃತ್ಯ ದ್ವಿತೀಯ), ದಿವ್ಯ ನಾಯ್ಕ (ಇಂಗ್ಲೀಷ್ ಕಂಠಪಾಠ ತೃತೀಯ), ಸುಕನ್ಯಾ ಪಟಗಾರ್ (ಭಕ್ತಿ ಗೀತೆ ತೃತೀಯ), ಅರ್ಚನ ಗೌಡ (ತೆಲಗು ಕಂಠಪಾಠ ತೃತೀಯ)ಅಂತೂ 27 ಪ್ರಶಸ್ತಿಗಳನ್ನು ಪಡೆದು ಹೆಗಡೆ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರಿದ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಎಸ್ ಡಿ ಎಂಸಿ, ಪಾಲಕ ಪೋಷಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ .