ಕುಮಟಾ: ಇಲ್ಲಿಯ ಚಿತ್ರಿಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಂಕೋಲಾ ಶೇಟಗೇರಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯ ವೈಯಕ್ತಿಕ ಎತ್ತರ ಜಿಗಿತ ವಿಭಾಗದಲ್ಲಿ ಮಹಾಲಕ್ಷ್ಮೀ ಗೌಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಹಾಗೆಯೇ ಗುಂಪು ವಿಭಾಗದಲ್ಲಿ ಸಾಗರ್ ಹರಿಕಾಂತ, ಕಾರ್ತಿಕ ಪಟಗಾರ, ನಿರಂಜನ ನಾಯ್ಕ, ಚಿದಂಬರ ನಾಯ್ಕ, ಉಲ್ಲಾಸ ನಾಯ್ಕ, ಸೋಹನ್ ಅಂಬಿಗ, ಸಾತ್ವಿಕ ಭಟ್ಟ ಮತ್ತು ದರ್ಶನ ನಾಯ್ಕ ಬಾಲಕರ ಬಾಲ್ ಬ್ಯಾಡ್ಮಿಂಟನ್‍ನಲ್ಲಿ ಹಾಗೂ ಜೇನ್ ಫರ್ನಾಂಡಿಸ್, ಶ್ರೀರಶ್ಮೀ ಭಟ್ಟ, ಸ್ನೇಹಾ ಶೇಟ್, ಮುಕ್ತಾ ಭಟ್ಟ, ರಕ್ಷಿತಾ ಪೂಜಾರಿ, ಸಾಜಿಯಾ ಶೇಖ್, ಸಹನಾ ಪಟಗಾರ ಮತ್ತು ಮಹಾಲಕ್ಷ್ಮೀ ಗೌಡ ಬಾಲಕಿಯರ ಬ್ಯಾಡ್ಮಿಂಟನ್‍ನಲ್ಲೂ ಗೆದ್ದು ವಿಭಾಗ ಮಟ್ಟದ ಸ್ಪರ್ಧೆಗೆ ಆಡಲು ಅರ್ಹತೆ ಪಡೆದಿದ್ದಾರೆ. ಕೆನರಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕ, ಶಿಕ್ಷಕ ಸಿಬ್ಬಂದಿಗಳು ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ಆಚಾರ್ಯ ಅವರನ್ನು ಅಭಿನಂದಿಸಿದ್ದಾರೆ.

RELATED ARTICLES  ಜನವರಿ 26ಕ್ಕೆ ಹೊಸಾಡಿನ ಅಮೃತಧಾರಾ ಗೋಶಾಲೆಯಲ್ಲಿ “ಗೋ ಸಂಧ್ಯಾ”