ಪುಸ್ತಕಗಳೇ ನಮಗೆ ನಿಜಾದ ಸಂಗಾತಿ ಎಂದು ಸಾಹಿತಿ ಝಮೀರುಲ್ಲ ಷರೀಫ ನುಡಿದರು. ಅವರು ಇಲ್ಲಿನ ಜಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಹಾಗೂ ತಾಲೂಕು ಕ್ನಡ ಸಾಃಇತ್ಯ ಪರಿಷತ್ತಿನ ಸಹಯೋಗದಲ್ಲಿ
ನಡೆದ ಬಿ.ಪಿ.ಶೀವಾನಂದ ರಾವ್ ಅವರ ಬಿಡಿಬರೆಹಗಳ ಸಂಕಲನ ಹಕೀಕತ್ತು ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಸಾಹಿತ್ಯದ ಓದು ವ್ಯಕ್ತಿಯನ್ನು ಸಂಸ್ಕರಿಸುತ್ತದೆ, ಭಾವಿ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಓದುವ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಜೊತೆಗೆ ತಮ್ಮ ವೃತ್ತಿ ನಡೆಸುವ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಓದುವಂತೆ ಪ್ರೇರೇಪಿಸಬೇಕೆಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ ಆರ್ ನರಸಿಂಹ ಮೂರ್ತಿ ಮಾತನಾಡಿ ಸಾಹಿತಿಗಳ ಕೃತಿ ಮತ್ತು ಬದುಕಿನ ಅವಲೋಕನ ಮಾಡಿದಾಗ ನಮ್ಮಲ್ಲಿ ವೈಚಾರಿಕತೆ ಮೂಡುತ್ತದೆಯಲ್ಲದೇ ಮಾನಸಿಕ ವಿಕಾಸಕ್ಕೂ ಸಹಾಯಕವಾಗುತ್ತದೆ. ಪ್ರಶಿಕ್ಷಕರು ಸಾಹಿತ್ಯಿಕ ಕೃತಿಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ನುಡಿದು ಕೃತಿಯನ್ನು ಲೋಕಾರ್ಪಣೆ ಮಾಡಿದ ಬಿ.ಪಿ.ಶಿವಾನಂದ ರಾವರವರನ್ನು ಅಭಿನಂದಿಸಿದರು. ತಾಲೂಕಾ ಕಸಾಪ ವತಿಯಿಂದ ಬಿ.ಪಿ.ಶಿವಾನಂದರಾವ ಅವರನ್ನು ಸನ್ಮಾನಿಸಲಾಯಿತು.
ಕೃತಿಕಾರ ಬಿ.ಪಿ.ಶಿವಾನಂದ ಮಾತನಾಡಿದರಲ್ಲದೇ ಪ್ರಶಿಕ್ಷಣಾರ್ಥಿಗಳಾದ ಅಜಿತ್, ಕುಮಾರ ಗೊಂಡ, ರಾಮ,ಸುಮನಾ ಹಾಗೂ ಚೈತನ್ಯ ಮುಂತಾದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಪ್ರಶಿಕ್ಷನಾರ್ಥಿಗಳೊಂದಿಗೆ
ಸಂವಾದ ನಡೆಸಿದರು. ಸಾಹಿತಿ ಶ್ರೀಧರ ಶೇಟ್ ಕೃತಿಪರಿಚಯ ಮಾಡಿದರೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಎಲ್ಲರನ್ನು ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು. ಸುಮಂಗಲಾ, ಮಣಿರತ್ನಾ, ವೇದಾ, ಸುಮಿತ್ರಾ, ಪರಮೇಶ್ವರಿ ನಿತ್ಯೋತ್ಸವ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..ಪ್ರಶಿಕ್ಷಣಾರ್ಥಿ ಕುಮಾರಿ ಚಂದ್ರಪ್ರಭಾ ಕೊಡಿಯಾ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ನಾರಾಯಣ ಯಾಜಿ, ಕಸಾಪ ಗೌರವ ಕಾರ್ಯದರ್ಶಿ ಗಣೇಶ ಯಾಜಿ, ಕೃಷ್ಣ ಮೊಗೇರ, ಉಪನ್ಯಾಸಕ ವೃಂದದವರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.