ಕುಮಟಾ : ಭಾರತದ ಸಂಸ್ಕೃತಿಯ ಮೇಲಾದ ಆಕ್ರಮಣದಿಂದ ದಿಕ್ಕೆಟ್ಟ ಸಮಾಜವನ್ನು  ಸಂತೈಸುವಲ್ಲಿ ಭಕ್ತಿಚಳುವಳಿ ಪ್ರಮುಖ ಪಾತ್ರ ವಹಿಸಿದೆ.ಅದರಲ್ಲೂ ಕರ್ನಾಟಕದಲ್ಲಿ ವ್ಯಾಸರಾಯರು ಕನಕದಾಸರು  ಪುರಂದರದಾಸರು ಜನತೆಗೆ ದಾರಿದೀಪವಾಗುವಂತ ಸಾಹಿತ್ಯ ವನ್ನು ರಚಿಸಿ ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದಿದ್ದಾರೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಚಿದಾನಂದ ಭಂಡಾರಿ ಹೇಳಿದರು .ಭಾನುವಾರ ಉಡುಪಿಯಲ್ಲಿ ಜರುಗಿದ ಘರ್ ಘರ್ ಭಜನ್  ನೂರನೆಯ ಕಾರ್ಯಕ್ರಮದಲ್ಲಿ ಉತ್ತರಕನ್ನಡ ದಿಂದ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕೊಂಕಣಿ ಭಾಷಿಕ ಜನಾಂಗದವರಲ್ಲಿ ಬಹುತೇಕ ಮನೆಗಳಲ್ಲಿ ರಾತ್ರಿ ಭಜನೆ ಆಗದೇ ಊಟ ನೀಡುವುದಿಲ್ಲ.ತಾನೂ ಚಿಕ್ಕಂದಿನಿಂದ ತಂದೆಯ ತೊಡೆಯಮೇಲೆ ಕುಳಿತು ಭಜನೆ ಹಾಡುತ್ತಿದ್ದೆ.ಪುರಂದರ ದಾಸರು ಕನಕದಾಸರು ವ್ಯಾಸರಾಯರಿಂದ ಧನ್ಯವಾದ ಉಡುಪಿಯ ನೆಲದಲ್ಲಿ ಮನೆಮನೆಗೆ ತೆರಳಿ ಭಜನೆ ಹಾಡುವ ಕಾರ್ಯಕ್ರಮ ಅತ್ಯಂತ ಸಾರ್ಥಕವಾದ ಕಾರ್ಯಕ್ರಮ ಆಗಿದೆ.ಈ ಕಾರ್ಯಕ್ರಮದ ಅತಿಥಿ ಆಗಿರುವುದು ನನ್ನ ಪುಣ್ಯ.ಕಾಸರಗೋಡು ಚಿನ್ನಾ ಅವರ ಭಾಷೆಯ ಮೇಲಿನ ಕಳಕಳಿ ಕೊಂಕಣಿ ಭಾಷಿಕ ಹಿಂದುಳಿದ ಸಮಾಜವನ್ನು ಅವರು ಜಾಗ್ರತಗೊಳಿಸಿರುವುದು ಈ ರೀತಿಯ ಕಾರ್ಯಕ್ರಮಗಳ ಮೂಲಕವೇ ಎಂದು ಚಿದಾನಂದ ಭಂಡಾರಿ ಹೇಳಿದರು.
ಚೇಂಪಿ ರಾಮಚಂದ್ರ ಭಟ್ ಅವರ ಸಾರಥ್ಯದಲ್ಲಿ ಮನೆಮನೆಗೆ ತೆರಳಿ ಭಜನೆ ಹೇಳುವ ಹಾಗೂ ಅದರ ಅರ್ಥವನ್ನು ವಿಶ್ಲೇಷಣೆಮಾಡುವ ಕಾರ್ಯವು ಅತ್ಯಂತ ಜನಪ್ರಿಯ ಆಗುತ್ತಿದ್ದು.ತಮ್ಮಲ್ಲೂ ಈ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲನಚಿತ ನಟ ನಿರ್ದೇಶಕ ರಂಗಕರ್ಮಿ ಕಾಸರಗೋಡು ಚಿನ್ನಾ ವಹಿಸಿದ್ದರು.ಸಂಸಾರ ಸಾಗರ ವನ್ನು ಸುಲಭವಾಗಿ ದಾಟುವಲ್ಲಿ ದಾಸರವಾಣಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.ಭಕ್ತಿ ಒಂದೇ ಸಾಧನ.ಸಂಪತ್ತಿನಿಂದ ಎಲ್ಲವೂ ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿನ್ನಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಚ್ಯಾರಿಟೇಬಲ್ ಟ್ರಸ್ಟನ ಟ್ರಸ್ಟಿ ಮುಂಡಾಶಿ ಶಾಂತಾಮಪೈ.ಕುಂದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಕಾಮತ್. ಉಡುಪಿಯ ಅಪರಜಿಲ್ಲಾಧಿಕಾರಿ ಸದಾಶಿವ ಪ್ರಭು.ವಾಣಿಜ್ಯ ಮತ್ತು ಕೈಗಾರಿಕಾಇಲಾಖೆಯ ಜಂಟಿ ನಿರ್ದೇಶಕರಾದ ಗೋಕುಲದಾಸ ನಾಯಕ.ಸಮಾಜಸೇವಕರಾದ ವಿಶ್ವನಾಥ ಶೆಣೈ .ನಟ ಶಶಿಭೂಣಕಿಣಿ.ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂ  ರಮೇಶ ಭಟ್. ಲಕ್ಷ್ಮಣ ಶೆಣೈ. ಚೇಂಪಿ ರಾಮಚಂದ್ರ ಅನಂತ ಭಟ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಟಿಪ್ಪು ಜಯಂತಿಗೆ ವಿರೋಧ: ಕುಮಟಾದಲ್ಲಿ ಪ್ರತಿಭಟನಾ ಮೆರವಣಿಗೆ