ಕುಮಟಾ: ಕೆನರಾ ಕಾಲೇಜು ಸೊಸೈಟಿಯ 2019ರ ಬೆಸ್ಟ್ ಸ್ಟುಡೆಂಟ್ ಅವಾರ್ಡ್‌ನ್ನ ಬ್ರಹ್ಮೂರಿನ ಮಾನಸಾ ರಾಮಚಂದ್ರ ಭಟ್ಟ ಪಡೆದು ಸಾಧನೆ ಮಾಡಿದ್ದಾರೆ. ಈ ಬಾರಿ ಬಿಎಸ್‌ಸಿ ಶಿಕ್ಷಣ ಮುಗಿಸಿದ ಇವರು 87 ಶೇಕಡಾ ಅಂಕ ಪಡೆದು ಗಮನ ಸೆಳೆದಿದ್ದರು.

ಬಾಳಿಗಾ ಆರ್ಟ್ಸ್ & ಸೈನ್ಸ್ ಕಾಲೇಜಿನ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಕಾಲೇಜು ಸೊಸೈಟಿಯ ರಾಘು ಪಿಕಳೆ ಮಾನಸಾ ಭಟ್ ಗೆ ಈ ಅವಾರ್ಡ್ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸೆಕ್ರೆಟರಿ ವಿನೋದ ಪ್ರಭು, ಚೇರ್‌ಮೆನ್ ಮುರಳೀಧರ ಪ್ರಭು, ವಾಯ್ಸ್ ಪ್ರೆಸಿಡೆಂಟ್ ರತ್ನಾಕರ ಕಾಮತ್ ಮುಂತಾದವರು ಇದ್ದರು. ಇನ್ನು ಈಕೆಯ ಸಾಧನೆಗೆ ಕುಟುಂಬದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಉತ್ತರಕನ್ನಡ ಜಿಲ್ಲೆ ಶಾರ್ಟ್‌ಮೂವಿ ಕ್ಲಬ್‌ನ ಸಂಸ್ಥಾಪಕ ವಿನಾಯಕ ಬ್ರಹ್ಮೂರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದು ಜಿಲ್ಲೆ ಮತ್ತು ನಾಡಿಗೆ ಬ್ರಹ್ಮೂರು ಗ್ರಾಮವು ಹಲವು ಅದ್ಭುತ ಪ್ರತಿಭೆಗಳನ್ನ ಕೊಡುಗೆಯಾಗಿ ನೀಡಿದೆ.

RELATED ARTICLES  ಇಂದು ಉತ್ತರ ಕನ್ನಡದ 92 ಜನರಲ್ಲಿ ಕೊರೋನಾ ದೃಢ : 83 ಮಂದಿ ಗುಣಮುಖ

ಮಾನಸಾ ಭಟ್ಟ ಪ್ರತಿಭಾವಂತೆಯಾಗಿದ್ದು ಈ ಅವಾರ್ಡ್ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಕಲಿಕೆಯಲ್ಲಿ ಇನ್ನಷ್ಟು ಶ್ರೇಷ್ಠ ಸಾಧನೆಗಳು ಈಕೆಯಿಂದ ಹೊರಹುಮ್ಮಲಿ ಎಂದು ಶುಭ ಹಾರೈಸಿದ್ದಾರೆ.

RELATED ARTICLES  ಹೆಬ್ಬಾರರಿಗೆ ಒಲಿದ ವಿಜಯಲಕ್ಷ್ಮಿ: ಯಲ್ಲಾಪುರದಲ್ಲಿ ಬಿಜೆಪಿ ಕಮಾಲ್