ಕುಮಟಾ: ಡಾ.ಎ.ವಿ.ಬಾಳಿಗಾ ಪದವಿಪೂರ್ವ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಲೋಹಿತ್ ನಾಯ್ಕ ಅ.3 ರಂದು ಥಾಯ್ಲೆಂಡ್‍ನಲ್ಲಿ ನಡೆಯುವ 17 ವರ್ಷ ಒಳಗಿನ ಕಿರಿಯರ ವಿಭಾಗದ ಕಬಡ್ಡಿ ವಿಶ್ವಕಪ್‍ಗೆ ಆಯ್ಕೆಯಾಗುವ ಮೂಲಕ ಕಾಲೇಜಿನಲ್ಲಿ ಐತಿಹಾಸಿಕ ದಾಖಲೆಯನ್ನು ಬರೆದಿದ್ದಾನೆ.

ಈತನು ಮೂಲತಃ ಸಿದ್ಧಾಪುರ ತಾಲೂಕಿನ ಸುಂಕತ್ತಿ ಗ್ರಾಮದವನಾಗಿದ್ದು, ಕೃಷಿಕ ಕುಟುಂಬದವರಾದ ಧರ್ಮಾ ನಾಯ್ಕ ಹಾಗೂ ತಾಯಿ ಪಾರ್ವತಿ ನಾಯ್ಕ ಇವರ ಪುತ್ರನಾಗಿದ್ದಾನೆ. ಸಿದ್ಧಾಪುರದ ಹಲಗೇರಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದಿದ ಲೋಹಿತ್ ಸಧ್ಯ ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನದಲ್ಲಿ ಅಭ್ಯಸಿಸುತ್ತಿದ್ದಾನೆ.

RELATED ARTICLES  ಅನಾರೋಗ್ಯದಿಂದ ಬಳಲುತ್ತಿದ್ದಾತ ಆತ್ಮಹತ್ಯೆ ಮಾಡಿಕೊಂಡ.
vlcsnap 2019 09 26 11h22m26s431

ಈತನಿಗೆ ಕಬಡ್ಡಿ ಆಟದಲ್ಲಿ ವಿಶೇಷ ಆಸಕ್ತಿಯಿದ್ದು, ಕಬಡ್ಡಿಯಲ್ಲಿ ವಿಶೇಷ ತರಬೇತಿಯನ್ನು ಪಡೆಯಲು ಕುಮಟಾ ಕಾಲೇಜಿಗೆ ಸೇರ್ಪಡೆಗೊಂಡಿದ್ದನು. ಅದೇರೀತಿ ಈತನಿಗೆ ಡಾ.ಕಮಲಾ ಬಾಳಿಗಾ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಪ್ರೊ.ಜಿ.ಡಿ.ಭಟ್ಟ ತರಬೇತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಜು. 23 ಹಾಗೂ 24 ರಂದು ನಡೆದ ರಾಷ್ಟ್ರೀಯ ಕಿರಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಈತನು ಗಮನಾರ್ಹ ಸಾಧನೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

RELATED ARTICLES  ರೈಲು ಹರಿದು ಛಿದ್ರವಾಯ್ತು ದೇಹ.

ಕೆನರಾ ಕಾಲೇಜ್ ಸೊಸೈಟಿ ಕಾರ್ಯದರ್ಶಿ ವಿನೋದ ಪ್ರಭು ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಯೋರ್ವ ವಿಶ್ವಕಫ್‍ಗೆ ಹೋಗುತ್ತಿರುವುದು ನಮಗೆ ಹಾಗೂ ಸೊಸೈಟಿಗೆ ಹೆಮ್ಮೆಯ ವಿಷಯ ಎಂದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಯು.ಜಿ.ಶಾಸ್ತ್ರಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವೀಣಾ ಕಾಮತ, ದೈಹಿಕ ಶಿಕ್ಷಣ ಶಿಕ್ಷಕ ಪ್ರೊ.ಅಂಬಿಗ, ಪ್ರಮೋದ ನಾಯ್ಕ ಹಾಗೂ ಇತರರು ಹಾಜರಿದ್ದರು.