ಶಿರಸಿ: ನಗರದಲ್ಲಿ ಮತ್ತೆ ಜಾನುವಾರು ಕಳ್ಳತನ ಸದ್ದು ಮಾಡಿದೆ. ರಸ್ತೆಯ ಪಕ್ಕದಲ್ಲಿ ಮಲಗಿಕೊಂಡಿದ್ದ ಆಕಳು ಕರುವೊಂದನ್ನು ಕಾರಿಗೆ ತುಂಬಲು ಇಬ್ಬರು ದುಷ್ಕರ್ಮಿಗಳು ವಿಫಲ ಪ್ರಯತ್ನ ನಡೆಸಿದ ಘಟನೆ ಇಲ್ಲಿನ ಹೊಸಪೇಟೆ ರಸ್ತೆಯಲ್ಲಿ ನಡೆದಿದೆ.

ಕಳೆದ ವರ್ಷ ಹೊಸ ಬಸ್ ನಿಲ್ದಾಣದ ಬಳಿ ನಡೆದಂತೆ ಈ ಬಾರಿ ಹೊಸಪೇಟೆ ರಸ್ತೆಯಲ್ಲಿ ಮಧ್ಯರಾತ್ರಿ ಮಲಗಿದ್ದ ಆಕಳು ಕರುವನ್ನು ಇರ್ವರು ಗೋಕಳ್ಳರು ಗಾಡಿಗೆ ತುಂಬಿಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಆಕಳು ಕರು ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದು, ಘಟನೆ ಸಿಸಿಟಿಯಲ್ಲಿ ದಾಖಲಾಗಿದೆ.

RELATED ARTICLES  ತಂದೆಯ ಅಂತ್ಯಕ್ರಿಯೆ ನಡೆಸಿದ ಪುತ್ರಿಯರು.

ಮಧ್ಯರಾತ್ರಿ ಸುಮಾರು 1.49 ಕ್ಕೆ ಬಂದ ಗೋ ಕಳ್ಳರು ರಸ್ತೆಯ ಪಕ್ಕದಲ್ಲಿ ಮಲಗಿದ್ದ ಒತ್ತಾಯ ಪೂರ್ವಕವಾಗಿ ಎಬ್ಬಿಸಿ ಗಾಡಿಯ ಡಿಕ್ಕಿಗೆ ತುಂಬಲು ಪ್ರಯತ್ನಿಸಿದ್ದಾರೆ. ಆಗ ಹಿಂಬದಿಯಿಂದ ನಾಲ್ಕಾರು ಜಾನುವಾರುಗಳು ಕರುವನ್ನು ತಪ್ಪಿಸಲು ನೋಡಿದ್ದಾರೆ. ಆದರೆ ಕಳ್ಳರು ಅವುಗಳನ್ನು ಬೆದರಿಸಿ, ಕರುವನ್ನು ತುಂಬಲು ಯತ್ನ ನಡೆಸಿದ್ದಾರೆ. ಆದರೆ ಕೊನೆ ಹಂತದಲ್ಲಿ ಕರು ತಪ್ಪಿಸಿಕೊಂಡು ಓಡಿ ಹೋಗಿದ್ದು, ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

RELATED ARTICLES  ಕುಮಟಾದ ಹೊಲನಗದ್ದೆಯಲ್ಲಿ ಆರಂಭಗೊಂಡಿತು ನಗೆ ಕೂಟ.