ಹೊನ್ನಾವರ ತಾಲೂಕಿನ ಎರಡು ದಿಗ್ಗಜ ವ್ಯಕ್ತಿಗಳ ಸಮಾಗಮ ಶಿಕ್ಷಣ ತಜ್ಞ ವಿಚಾರವಾದಿ ಡಾ ಗುರುರಾಜ ಕರಜಗಿ ಮತ್ತು ಆಳ್ವಾಸ್ ಮುಖ್ಯಸ್ಥ ಮೊಹನ ಆಳ್ವಾರ ಮಹಾ ಸಂಧೇಶ ಸಾರಲು ಅಣಿಯಾಗುತ್ತಿದೆ ಶ್ರಿರಾಮ ಸಿಂಧು ಸ್ಮಾರಕ ಪ್ರತಿಷ್ಟಾನ. ಹೊನ್ನಾವರ ಪಟ್ಟಣದ ಪ್ರಭಾತನಗರದಲ್ಲಿ ಸಪ್ಟೆಂಬರ್ 29ರ ರವಿವಾರ ಮದ್ಯಾಹ್ನ 4 ಗಂಟೆಗೆ ಶ್ರಿ ರಾಮ ಸಿಂಧು ಗೌರಿ ಪ್ರತಿಷ್ಟಾನದ ಅಡಿಯಲ್ಲಿ ಸ್ಪಂದನ ವಿಚಾರ ಸಂಕಿರಣ ಇಂದಿನ ಶಿಕ್ಷಣ ಒಂದು ಆತ್ಮವಲೋಕನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ .


ಕಳೆದ ಹಲವು ವರ್ಷಗಳೀಂದ ಸರ‍್ಪಣೆ, ಆರಾಧನೆ, ಸ್ಪಂದನದಂತಹ ಹಲವು ಕಾರ್ಯಕ್ರಮವನ್ನು ಆಯೊಜಿಸಿರುವ ಪ್ರತಿಷ್ಟಾನ ಈ ಬಾರಿ ಶಿಕ್ಷಣ ನೀಡುವ ಶಿಕ್ಷಕರಿಗೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ತಮ್ಮ ಮಕ್ಕಳ ಭವಿಷ್ಯದ ಚಿಂತೆ ವ್ಯಕ್ತಪಡಿಸುವ ಪಾಲಕರನ್ನು ಗುರಿಯಾಗಿಸಿ ಶಿಕ್ಷಣದ ಕುರಿತಾದ ಚಿಂತನ ಮಂಥನಕ್ಕೆ ಅಣಿಯಾಗುತ್ತಿದೆ. ಇಬ್ಬರು ಮಹಾನ್ ಚೇತನರಾದ ಗುರುರಾಜ ಕರಜಗಿ ಹಾಗೂ ಮೋಹನ ಆಳ್ವಾರಿಂದ ಶಿಕ್ಷಣದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಇಂತಹ ಕಾರ್ಯಕ್ರಮ ಹೊನ್ನಾವರದಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕಿದೆ .

RELATED ARTICLES  ಮೂಡಂಗಿ ರಂಗಮಂದಿರದಲ್ಲಿ "ಪ್ರಜಾರಾಜ್ಯೋತ್ಸವ ಕಾರ್ಯಕ್ರಮ"


ಪ್ರತಿಷ್ಟಾನದ ಹೆಸರನ್ನು ಡಾ ಯುವರಾಜರು ತಂದೆ ಅತ್ತೆ ಹಾಗೂ ಮಾವನವರ ಸವಿನೆನೆಪಿಗಾಗಿ ಮಾಡುತ್ತಿದ್ದು ಇದೊಂದು ಅರ್ಪರ್ವವಾದ ಕಾರ್ಯಕ್ರಮ. ಹಿಂದೆ ಹಲವು ಬಾರಿ ಗುರುರಾಜ ಕರಜಗಿಯವರನ್ನು ತಾಲೂಕಿಗೆ ಕರೆತರುವ ಪ್ರಯತ್ನ ನಡೆದಿತ್ತಾದರೂ ಇದುವರೆಗೂ ಆ ಸೌಭಾಗ್ಯ ದೊರೆತಿರಲಿಲ್ಲ. ಇದು ತಾಲೂಕಿಗೆ ಜ್ಞಾನರ್ಜನೆಗಾಗಿ ಒದಗಿ ಬಂದ ಸುಯೋಗ ಹಲವು ಜನೋಪಯೋಗಿ ಕಾರ್ಯ ಮಾಡುವ ಮೂಲಕ ಜನಮನ್ನಣೆ ಪಡೆದ ಟ್ರಸ್ಟ ಹೊನ್ನಾವರದಲ್ಲಿ ಬಹುಜನರ ಬಯಕೆಯನ್ನು ಗಮನಿಸಿ ಮಾಹಿತಿ ನೀಡಲು ಸಿದ್ದವಾಗಿದೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತವಾದ ಆಹ್ವಾನ.

RELATED ARTICLES  ಶ್ರೀಮಹಾಬಲೇಶ್ವರ ದೇವಾಲಯ ಶ್ರೀಮಠಕ್ಕೆ ಸಂಪಾದನೆಯ ಮೂಲವಲ್ಲ ; ಸೇವೆಯ ಸಾಧನ


3 ಗಂಟೆಗಳಿಗೆ ಸೀಮೀತವಾಗಿದ್ದು ಉದ್ಘಾಟನೆಯನ್ನು ಆಳ್ವಾಸ ಸಂಸ್ತೆಯ ಮೋಹನ ಆಳ್ವಾ ಚಾಲನೆ ನೀಡಲಿದ್ದು, ಸೆಂಟ್ ಇಗ್ನೆಷಿಯಸ್ ಸಂಶ್ತೆಯ ನಿರ್ದೇಶಕರಾದ ವಂದನೀಯ ಸಿಸ್ಟರ್ ಮರಿಯಾ ಗೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಖ್ಯಾತ ಶಿಕ್ಷಣ ತಜ್ಞರಾದ ಗುರುರಾಜ ಕರಜಗಿ ಸಂದೇಶ ಸಾರಲಿದ್ದು ವೇದಿಕೆಯಲ್ಲಿ ಡಿಡಿಪಿಐ ಕೆ. ಮಂಜುನಾಥ, ಹಿರಿಯ ಪತ್ರಕರ್ತರಾದ ಜಿಯು ಭಟ್, ಕ್ಷೆತ್ರ ಶಿಕ್ಷಣಾಧಿಕಾರಿ ಅಶೋಕ ಭಜಂತ್ರಿ, ಜಿ.ಟಿಪೈ, ಫಾಧರ್ ಜಾನ್ ಉಮನ್, ಜಿ.ಜಿ.ಸಭಾಹಿತ, ಕೃಷ್ಣಮೂರ್ತಿ ಭಟ್ ಶಿವಾನಿ ಉಪಸ್ಥಿತಇಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇಧೆ ಸಂದರ್ಭದಲ್ಲಿ ಆದರ್ಶ ಶಿಕ್ಷಕರಾದ ಎಸ್.ಜೆ.ಕೈರನ್, ಎಚ್.ಎನ್.ಪೈ, ರಾಜ್ಯಮಟ್ಟದ ರ‍್ಯಾಂಕ್ ವಿಜೇತರಾದ ಕುಮಾರಿ ಪ್ರಮಥಾ ಭಟ್, ಹಾಗೂ ನಾಗಾಂಜಲಿ ನಾಯ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.