ಭಟ್ಕಳ: ಮನೆಯಲ್ಲಿ ಮಲಗಿದ್ದ ಮಗುವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಣ ಮಾಡಲು ವಿಫಲ ಯತ್ನನಡೆಸಿದ್ದಾನೆ ಎನ್ನಲಾದ ದೂರು ಇದೀಗ ಜನತೆಯ ನಿದ್ದೆಗೆಡಿಸಿದೆ.

ತಾಲೂಕಿನ ಮದೀನಾ ಕಾಲೋನಿ ಜಾಮಿಯಾಬಾದ್ ರಸ್ತೆಯಲ್ಲಿ ಮನೆಯಲ್ಲಿ ಮಲಗಿದ್ದ ಒಂದು ವರೆ ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಣ ಮಾಡಲು ವಿಫಲ ಯತ್ನ ನಡೆಸಿದ್ದಾಗಿ ಮಗುವಿನ ಪಾಲಕರು ಇಲ್ಲಿನ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರೊಂದನ್ನು ನೀಡಿದ್ದಾರೆ.

RELATED ARTICLES  ಕುಮಟಾದಲ್ಲಿ ನವೀನ ನೇತ್ರಾಲಯ ಉದ್ಘಾಟನೆ

ಮದೀನಾ ಕಾಲೋನಿ ಜಾಮಿಯಾಬಾದ್ ರಸ್ತೆಯ ಬಾಫಕ್ಕಿ ವಿಲ್ಲಾದ ಹುಜೈಫಾ ಸೈಯ್ಯದ್ ಮುಹಮ್ಮದ್ ಎನ್ನುವವರೇ ದೂರನ್ನು ದಾಖಲಿಸಿದ ವ್ಯಕ್ತಿಯಾಗಿದ್ದಾರೆ.

ಬುಧವಾರ ಬೆಳಗ್ಗೆ 8.30 ರ ಸುಮಾರಿಗೆ ಮನೆಯಲ್ಲಿ ನನ್ನ ತಂಗಿಯ ಪಕ್ಕ ಮಲಗಿದ್ದ ಆಕೆಯ ಒಂದುವರೆ ವರ್ಷದ ಮಗು ಫೈಝಾ ಎಂಬಾಕೆಯನ್ನು ತಲೆಯ ಮೇಲೆ ಹೆಲ್ಮೇಟ್ ಧರಿಸಿದ ವ್ಯಕ್ತಿಯೊಬ್ಬ ಅಪಹರಣ ಮಾಡಿಕೊಂಡು ಹೋಗುತ್ತಿರುವುದು ಗಮನಿಸಿದ್ದು ಕೂಡಲೆ ಬೊಬ್ಬೆ ಹೊಡೆಯಲು ಪ್ರಾರಂಭಿಸಿದಾಗ ಮಗುವನ್ನು ಮನೆಯ ಕಂಪೌಂಡ್ ಗೋಡೆಯ ಬಳಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

RELATED ARTICLES  ಭಟ್ಕಳ ಎಬಿವಿಪಿ ವತಿಯಿಂದ ಕಾರ್ಗಿಲ್ ವಿಜಯ ದಿವಸ ಸಂಭ್ರಮಾಚರಣೆ.

ಘಟನೆಯಿಂದ ಜನತೆ ಕಂಗಲಾಗಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಾಗೂ ಮನೆಯ ಹೊರಗೆ ಕಳುಹಿಸಲೂ ಭಯ ಪಡುವಂತಾಗಿದೆ.