ಶ್ರೀ ಕರಿಕಾನನ ಪರಮೇಶ್ವರಿ ದೇವಿ ನೀಲಕೋಡ ಮತ್ತು ಶ್ರೀ ವಂದಡಿಕೆ ಶಂಭುಲಿಂಗೇಶ್ವರ ದೇವ ನೀಲಕೋಡ, ಹೊನ್ನಾವರ (ಉ.ಕ.)
ಶ್ರೀ ದೇವಿ ಸನ್ನಿಧಿಯಲ್ಲಿ ಆಗುವ ಉತ್ಸವಗಳು ಶ್ರೀ ವಿಕಾರೀನಾಮ ಸಂವತ್ಸರದ ಆಶ್ವೀಜ ಶುದ್ಧ ಪ್ರತಿಪದೆ ತಾ.29 – 9 – 2019 ರವಿವಾರದಿಂದ 8 – 10 – 2019ನೇ ಮಂಗಳವಾರ ಪರ್ಯಂತ “ಶರನ್ನವರಾತ್ರಿ ಮತ್ತು ವಿದ್ಯಾದಶಮಿ ಉತ್ಸವ” ನಡೆಯುವದು.
ಪ್ರತಿಪದೆ ದಿವಸ ಪಂಚಗವ್ಯ ಪ್ರಾಯಶ್ಚಿತ ಪೂರ್ವಕ ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ವೇದತ್ರಯ ಪಾರಾಯಣ, ಋತ್ವಿಗ್ವರ್ಣನೆ, ಸಪ್ತಶತಿ ಪಾರಾಯಣ,ಚಂಡಿಹವನ, ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಆರಂಭ.
ಸಾಯಂಕಾಲ ” ಶರನ್ನವರಾತ್ರಿ” ಪೂಜೆ ನವಮಿ ಪರ್ಯಂತ ನಡೆಯುವದು. ಚಂಡಿಹವನ ಶ್ರೀದೇವಿ ಪ್ರೇರಣೆಯಂತೆ ದೇವಿಯ ಸನ್ನಿಧಿಯಲ್ಲಿ ಪ್ರತಿದಿವಸ ನಡೆಯುವದು. “ಲಲಿತಾ ಪಂಚಮಿ” ತಾರೀಖ 3-10-2019 ಗುರುವಾರ ದಿವಸ ವಿಶೆಷ ಪಂಚಾಮ್ರತಾಭೀಷೇಕ ಹಾಗೂ ವಿಶೇಷ ಕ್ಷೀರಾಭೀಷೇಕ ಪೂಜೆ ನಡೆಯುವದು. ದಶಮಿ ಮಂಗಳವಾರ ತಾ.8-10-2019ರಂದು ವಿದ್ಯಾದಶಮಿ ಉತ್ಸವ, ಸಮಸ್ತ ದೇವತಾಪೂಜೆ, ಭೂತಾಹ್ವಾನ, ಕಲಶದಲ್ಲಿ ಶ್ರೀ ದೇವಿಯ ಆಹ್ವಾಹನೆ, ಚಿಕ್ಕಳೋತ್ಸವ, ವಂದಡಿಕೆ ಶ್ರೀ ಶಂಭುಲಿಂಗೇಶ್ವರನ ಸನ್ನಿಧಿಗೆ ದೇವಿಯ ಕಲಶ ಕೊಂಡೊಯ್ದು ಶಿವಶಕ್ತಿಯ ಪೂಜೆ, ತಿರುಗಿ ಬರುವಾಗ ಸೀಮೋಲ್ಲಂಘನೆ, ಆಯುಧಪೂಜೆ, ದೇವಿಯ ಸನ್ನಿಧಿಗೆ ಬಂದು ಮಹಾಪೂಜೆ ಮಂಗಲ. ಈ ರೀತಿಯಾಗಿ ದೇವಿಯ ಉತ್ಸವಗಳನ್ನು ಮತ್ತು ಪ್ರತಿದಿವಸ ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವರಲ್ಲಿ ರುದ್ರಾಭಿಷೇಕ ಸಹಸ್ರನಾಮ ಪೂಜೆ ನಡೆಸಲಾಗುವದು. ಶ್ರೀ ಕ್ಷೇತ್ರ ವಂದಡಿಕೆಯಲ್ಲಿ ವಿಶೇಷ ಸೇವೆಗೆ ಅವಕಾಶ ಇದೆ.
ಕಾರಣ ಶ್ರೀ ದೇವಿಯ ಶ್ರೀ ವಂದಡಿಕೆ ಶಂಭುಲಿಂಗೇಶ್ವರ ದೇವರುಗಳ ಕುಳಾವಿಗಳು ಹಾಗೂ ಸಮಸ್ತಭಕ್ತರು “ನವರಾತ್ರೆ ಉತ್ಸವ”ಕ್ಕಾಗಿ ಹಣ-ಅಕ್ಕಿ-ತೆಂಗಿನಕಾಯಿ ಇತರ ಧಾನ್ಯಗಳನ್ನು ತಮ್ಮ ಶಕ್ತ್ಯಾನುಸಾರಕೊಟ್ಟು ಶ್ರೀ ಕರಿಕಾನ ದೇವಿಯ ಹಾಗೂ ವಂದಡಿಕೆ ಶ್ರೀ ಶಂಭುಲಿಂಗೇಶ್ವರ ದೇವರುಗಳ ಕ್ರಪೆಗೆ ಪಾತ್ರರಾಗಬೇಕಾಗಿ ವಿನಂತಿ. ಮತ್ತು ಶ್ರೀ ದೇವಿಯ ಮುಡಿಗಂಧ ಪ್ರಸಾದವನ್ನು ಶಿರಸಾವಹಿಸಿಕೊಂಡು ಕ್ರತಾರ್ಥರಾಗಬಹುದು.
ವಿಶೇಷ ಸೂಚನೆ-?
ಪ್ರತಿದಿವಸ ಮಧ್ಯಾಹ್ನ 1-00 ಘಂಟೆಯೊಳಗೆ ಮಹಾಮಂಗಳಾರತಿ ನಡೆಯುವದು, ಭಕ್ತಾದಿಗಳು ಸಾನ್ನಿಧ್ಯದ ಪದ್ಧತಿಯಂತೆ ಸಹಕರಿಸಬೇಕಾಗಿ ವಿನಂತಿ..
ಕೃಪೆ – ಲೊಕೇಶ ಹೆಗಡೆ