ಕಾರವಾರ: ಜಿಲ್ಲೆಯ ಕರಾವಳಿ ಭಾಗದ ಜನತೆಗೆ ದಸರಾ ಹಬ್ಬಕ್ಕೆ ತೆರಳಲು ಅನೂಕೂಲವಾಗುವಂತೆ ದಸರಾ ಸ್ಪೆಷಲ್ ಸುವಿಧಾ ಎಕ್ಸ್‌ಪ್ರೆಸ್ ರೈಲನ್ನು ಕಾರವಾರದ ತನಕವೂ ಓಡಿಸಲು ನೈರುತ್ಯ ರೇಲ್ವೆ ಅನುಮತಿ ನೀಡಿದೆ.
ಈ ಮೊದಲು ಈ ರೈಲನ್ನು ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗದಲ್ಲಿ ಓಡಿಸಲು ತೀರ್ಮಾನಿಸಲಾಗಿತ್ತು, ಅದೇ ರೈಲು ಮುಂದೆ ಕಾರವಾರದವರೆಗೂ ಬರಲಿದೆ.
ಬೆಂಗಳೂರು- ಕಾರವಾರ ನಡುವೆ ಸ್ಪೆಷಲ್ ರೈಲು ಒಟ್ಟು ಎರಡು ಬಾರಿ ಸಂಚರಿಸಲಿದೆ. (ಹಳೇ
ಪಟ್ಟಿಯ ಪ್ರಕಾರ ಮಂಗಳೂರು ಮತ್ತು ಬೆಂಗಳೂರು ನಡುವೆ ಒಂದು ಬಾರಿ ಮಾತ್ರ ಪ್ರಯಾಣಿಸಲಿತ್ತು್). ನಂ.82655 ರ ರೈಲು ಅ.4ರಂದು ರಾತ್ರಿ 10.20 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಜಂಕ್ಷನ್, ಇಲ್ಲಿಂದ 8.50ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಕಾರವಾರ ತಲುಪಲಿದೆ. ಮೂಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾದಲ್ಲಿ ರೈಲಿಗೆ ನಿಲುಗಡೆ ದೊರೆಯಲಿದೆ.
ಈ ರೈಲು (ನಂ.82666) ಅದೇ ದಿನ ಅ.5 ರಂದು ಸಾಯಂಕಾಲ 5ಕ್ಕೆ ಕಾರವಾರದಿಂದ ಹೊರಟು ರಾತ್ರಿ 9.50ಕ್ಕೆ ಮಂಗಳೂರು ಜಂಕ್ಷನ್, ಇಲ್ಲಿಂದ
10.15ಕ್ಕೆ ಹೊರಟು ಮರುದಿನ ಬೆಳಗ್ಗೆ 8ಕ್ಕೆ ಯಲಹಂಕ ತಲುಪುತ್ತದೆ. ಬೆಂಗಳೂರು ಸಿಟಿ- ಕಾರವಾರ ಸುವಿಧಾ ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.82665)
ಆ.7 ರಂದು ಮಂಗಳವಾರ ರಾತ್ರಿ 11.55ಕ್ಕೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಬುಧವಾರ ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್ ಮತ್ತು ಅಪರಾಹ್ನ 3 ಕ್ಕೆ ಕಾರವಾರ ತಲುಪಲಿದೆ. ಅ.8 ರಂದು ಮಂಗಳವಾರ ಸಾಯಂಕಾಲ 5ಕ್ಕೆ ಕಾರವಾರ- ಯಲಹಂಕ (ಬೆಂಗಳೂರು) ಸುವಿಧಾ
ಸ್ಪೆಷಲ್ ರೈಲು (ನಂ.82656) ಕಾರವಾರದಿಂದ ಹೊರಟು ರಾತ್ರಿ 9.50ಕ್ಕೆ ಮಂಗಳೂರು ಜಂಕ್ಷನ್ ತಲುಪುವುದು, ಮತ್ತೆ 10.15ಕ್ಕೆ ಪ್ರಯಾಣ ಆರಂಭಿಸಿ ಬುಧವಾರ ಬೆಳಗ್ಗೆ 8ಕ್ಕೆ ಯಲಹಂಕ ತಲುಪಲಿದೆ.