ಭಟ್ಕಳ -ಸಾಹಿತ್ಯ ಸಂಗೀತದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ “ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ” ಇವರು ಉದಯೋನ್ಮುಖ ಕವಿಗಳನ್ನು ಉತ್ತೇಜಿಸುವ ಸಲುವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಡಿನಲ್ಲಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಚಿಕ್ಕಬಳ್ಳಾಪುರ ಬಿಜಿಎಸ್ ಕಾಲೇಜಿನ ಉದಯಕಿರಣ ಬಿ. ಅವರ “ಕಪ್ಪು ಮಚ್ಚೆ ” ಕವನಕ್ಕೆ ದೊರಕಿದ್ದು, ಪಲ್ಲವಿ ಕಿರಣ್ ಹೊನ್ನಾವರ ಇವರ “ಮುಗುದ ಮನದ ಬೇಗುದಿ” ದ್ವಿತೀಯ ಹಾಗೂ ಮಂಜುನಾಥ ಕುಣಬಿ ಬೋಳ್ಮನೆ ಯಲ್ಲಾಪುರ ಇವರ “ವಿಶ್ವಾಸ”ಕವನ ತೃತೀಯ ಬಹುಮಾನ ಪಡೆದುಕೊಂಡಿದೆ.

RELATED ARTICLES  4 ವರ್ಷದ ಪುಟ್ಟ ಬಾಲಕಿಗೆ ಕಡಿದ ನಾಗರ ಹಾವು : ವೈದ್ಯರ ಕಾರ್ಯಕ್ಕೆ ಮೆಚ್ಚುಗೆ


ವಂದನಾ ಮೋಹನ್ ಗೌಡ ಕಾರವಾರ ಇವರ ಕವನ …”ಬಡತನ ಯಾಕೆ “ಹಾಗೂ ವಿನಯ್ ಎಂ.ಶೇರುಗಾರ ಯಲ್ಲಾಪುರ ಇವರ “ಮೊದಲ ತುಂತುರು” ಕವನಗಳು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನ ಪಡೆದು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟು ನಲವತ್ತೊಂಬತ್ತು ಜನ ಕವಿಗಳು ತಮ್ಮ ಕವಿತೆಯನ್ನು ಕಳಿಸಿದ್ದು ಅಂತಿಮವಾಗಿ ಐದು ಜನ ಕವಿಗಳ ಐದು ಕವಿತೆಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಯಿತು ಎಂದು ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ತಿಳಿಸಿದ್ದಾರೆ. ವಿಜೇತರಿಗೆ ವಿಜಯ ದಶಮಿಯಂದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಅಂಚೆ ಮೂಲಕ ಕಳಿಸಿ ಕೊಡುವುದಾಗಿ ಸಂಘಟಕರು ತಿಳಿಸಿದ್ದಾರೆ.

RELATED ARTICLES  ನಿರಂತರ ಜ್ಞಾನ ದೀಪೋತ್ಸವದಿಂದ ದೇಶ ಪ್ರಜ್ವಲ: ರಾಘವೇಶ್ವರ ಶ್ರೀ