ಕಾರವಾರ: ಗೋಕರ್ಣ ಮುಖ್ಯ ಕಡಲಿನ ಸುಳಿಗೆ ಸಿಲುಕಿ‌ ಅಪಾಯದಲ್ಲಿದ್ದ ಪ್ರವಾಸಿಗನೊಬ್ಬನನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.

ಬಾಗಲಕೋಟೆ ಮೂಲದ 13 ಜನ ಮಂದಿ ಪ್ರವಾಸಿಗರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಎಲ್ಲರೂ ಬೆಳಿಗ್ಗೆ ಸಮುದ್ರ ಸ್ನಾನಕ್ಕೆ ಇಳಿದಾಗ, ಅವರಲ್ಲಿ ಶಿವಾಜಿ ಲಕ್ಕಪ್ಪ ಕರಬಾರಿ ಎನ್ನುವವರು ಸಮುದ್ರದ ಸುಳಿಗೆ ಸಿಲುಕಿದ್ದರು.

RELATED ARTICLES  ಹುಲಿ ದಾಳಿಗೆ ಗಬ್ಬದ ಆಕಳು ಬಲಿ

ಇದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿ ಮೋಹನ್ ಅಂಬಿಗ, ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗನ ಜೀವ ರಕ್ಷಣೆ ಮಾಡಿರದ್ದಾರೆ. ಜೀವ ರಕ್ಷಕ ಸಿಬ್ಬಂದಿಯ ಮೇಲ್ವಿಚಾರಕ ರವಿ ನಾಯ್ಕ ಅವರು ಮೋಹನ್ ಅವರಿಗೆ ಸಹಾಯ ಮಾಡಿದರು.

RELATED ARTICLES  ಖಾತೆಯ ಕೆವೈಸಿ ಮಾಡಿಸಿ ಕೊಡುವುದಾಗಿ ನಂಬಿಸಿ 83 ಸಾವಿರ ಎಗರಿಸಿದರು.