ಕುಮಟಾ : ತಾಲೂಕಿನ ಹೊಳೆಗದ್ದೆ ಸಮೀಪ IRB ಕಂಪನಿ ಹೊಸದಾಗಿ ನಿರ್ಮಾಣವಾಗುತ್ತಿರುವ ಟೋಲ್ ನಾಕಾ ಸಮೀಪ ಹಾಕಿರುವ ನಾಮ ಫಲಕದಲ್ಲಿ ಇಂಗ್ಲೀಷ ಮತ್ತು ಹಿಂದಿ ಮಾತ್ರ ಇದ್ದು ಅದರ ಜೊತೆ ಕನ್ನಡ ಸೇರಿಸಲೇ ಬೇಕೆಂದು ಕ.ರ.ವೇ ಜಿಲ್ಲಾ ಅಧ್ಯಕ್ಷ ಭಾಸ್ಕರ ಪಟಗಾರ ಎಚ್ಚರಿಕೆ ನೀಡಿದ್ದರು.

RELATED ARTICLES  ಟಿ.ಎಸ್.ಎಸ್ ನಲ್ಲಿ ಅಕ್ಟೋಬರ್ 11 ಮತ್ತು 12 ರಂದು ಆಟೋ & ಅಪ್ಲೈಯನ್ಸ್ ಎಕ್ಸ್ಫೋ 2019

ಈ ಹಿಂದೆಯೂ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ IRB ಕಂಪನಿಯವರು ಈ ವರೆಗೂ ಸ್ಪಂದಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

RELATED ARTICLES  ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹುಡುಗಿಯ ಮಾತಿಗೆ ಮರುಳಾಗಿ 4.90 ಲಕ್ಷ ಕಳಕೊಂಡ

ಈ ವರೆಗೆ ನಾಮಫಲಕ ತೆಗೆಯದ IRB ಕ್ರಮ ವಿರೋಧಿಸಿ ನಾಳೆ ಬೆಳಿಗ್ಗೆ 10:00 (ಬುಧವಾರ) ಗಂಟೆಗೆ ಮಸಿಬಡಿದು ಅದನ್ನು ಬದಲಾಯಿಸಿ ಬಿಸಿ ಮುಟ್ಟಿಸುತ್ತೇವೆ ಎಂದು ಕ.ರ.ವೇ ಜಿಲ್ಲಾ ಅಧ್ಯಕ್ಷ ಭಾಸ್ಕರ ಪಟಗಾರ ತಿಳಿಸಿದ್ದಾರೆ.