ಶ್ರೀ ಮಹಾಬಲೇಶ್ವರ ದೇವಾಲಯದ ವಿಕಾರಿ ಸಂವತ್ಸರದ ‘ಕದಿರು ಹರಣೋತ್ಸವ’ ಶಾಸ್ತ್ರೀಯ , ರೂಢಿಗತ ಪರಂಪರೆಯಂತೆ ಸು-ಸಂಪನ್ನಗೊಂಡಿತು . ಬಾವಿಕೊಡ್ಲದ ‘ದೇವರ ಗದ್ದೆ’ ಯಲ್ಲಿ ಮುಂಜಾನೆ 06.00 ಘಂಟೆಗೆ ಸಾರ್ವಭೌಮ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು . ನೂತನ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ಅಕ್ಕಿ ಪ್ರಸಾದ ವಿತರಣೆ ನಡೆಯಿತು.ನಂತರ ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ ಪ್ರಸಾದ ರೂಪದಲ್ಲಿ ನೂತನ ಭತ್ತದ ಕದಿರನ್ನು ವಿತರಿಸುತ್ತ ಶ್ರೀ ದೇವಾಲಯಕ್ಕೆ ಹಿಂತಿರುಗಿತು .ಶ್ರೀ ದೇವಾಲಯದ ನಂದಿ ಮಂಟಪದಲ್ಲಿ ನೂತನ ಕದಿರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು .