ಗೋಕರ್ಣ: ಇಲ್ಲಿನ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ್ ಟ್ರಸ್ಟನ ಶ್ರೀ ರಾಘವೇಶ್ವರಭಾರತೀ ಶಾಲೆಯಲ್ಲಿ ಅಕ್ಟೋಬರ್ 2 ರಂದು ಗಾಂಧೀಜಿ ಅವರ 150ನೇ ಜನ್ಮದಿನ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 108ನೇ ಜನ್ಮ ದಿನವನ್ನು ಆಚರಿಸಿದರು.


ಅಕ್ಟೋಬರ್ 2 ಪ್ರಯುಕ್ತ ಶಾಲೆಯಲ್ಲಿ ವಿಶೇಷವಾಗಿ, ಹಿರಿಯ ಸಹಾಯಕಿ ಶಿಕ್ಷಕಿ ವೃಂದಾ ಗಾಂವಕರ ಇವರು ” ರಘುಪತಿ ರಾಘವ ರಾಜಾರಾಮ್” ಎಂಬ ಭಜನಾ ಕಾರ್ಯಕ್ರಮವನ್ನು ನೀಡುವ ಜೊತೆಗೆ ಮುದ್ದು ಮಕ್ಕಳಿಂದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅಲಂಕಾರಿಕ ವೇಷವನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.

RELATED ARTICLES  2019ರ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3, 200 ರ್ಯಾಂಕ್ ಪಡೆದು ಸಾಧನೆ ಮಾಡಿದ ಕತಗಾಲದ ಚಂದ್ರಶೇಖರ ಗೌಡ


ಈ ಸಂದರ್ಭದಲ್ಲಿ ಶಾಲಾ ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವೀಸ್, ಮುಖ್ಯಾಧ್ಯಾಪಕಿ ಉಷಾ ನಾಯಕ, ಸಹ ಶಿಕ್ಷಕರು, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಪಾಲಕರು ಮುದ್ದು ಮಕ್ಕಳು ಹಾಜರಿದ್ದರು.

RELATED ARTICLES  ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳ ಚಿತ್ರ ಬಿಡುಗಡೆ ಮಾಡಿದ ನೌಕಾಸೇನೆ