ಹೊನ್ನಾವರದ ಎಸ್.ಡಿ.ಎಮ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕರಾದ ಪ್ರಸನ್ನ ಚಂದ್ರಕಾಂತ ಶೇಟ್ ರವರ ದೇಶಾಭಿಮಾನ ನಿಜಕ್ಕೂ ಶ್ಲಾಘನೀಯ.
ಈಗಾಗಲೇ 53 ಮಿ. ಗ್ರಾಂ. ಚಿನ್ನದಲ್ಲಿ ಅಮರ್ ಜವಾನ ಜ್ಯೋತಿಯನ್ನು ನಿರ್ಮಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲೆ ಮಾಡಿದ ಈತ ಈಗ ಭಾರತದ ಉದಯಕ್ಕೆ ಕಾರಣರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ಅಂಗವಾಗಿ ಅತೀ ಸೂಕ್ಷ್ಮವಾದ 150 ಮಿ.ಗ್ರಾಂ. ಚಿನ್ನದಲ್ಲಿ ಚಾಲನೆಯಲ್ಲಿರುವ ‘ಚರಕ’ ಹಾಗೂ 20 ಮಿ. ಗ್ರಾಂ. ತೂಕದ ಚಿನ್ನದ ಮಹಾತ್ಮಾ ಗಾಂಧಿಯವರ ಪ್ರತಿಕೃತಿಯನ್ನು ತಯಾರಿಸಿ ಮತ್ತೊಂದು ಸಾಧನೆಗೈದಿದ್ದಾನೆ.
ಚರಕ ಕೇವಲ 8 ಮಿ. ಮಿ. ಅಗಲ ಹಾಗೂ 5 ಮಿ. ಮಿ. ಎತ್ತರವಿದ್ದು, ಗಾಂಧೀಜಿಯವರ ಪ್ರತಿಕೃತಿ 1 ಸೆಂ.ಮೀ ರಷ್ಟು ಎತ್ತರವಿದೆ.
ಎಲ್ಲ ಪ್ರತಿಕೃತಿಗಳನ್ನು ಮುತುವರ್ಜಿಯಿಂದ ತಯಾರಿಸುತ್ತಿರುವ ಈತನ ಕಾರ್ಯವೈಖರಿ, ಸಾಧನೆ ನಿಜಕ್ಕೂ ಪ್ರಶಂಸನೀಯ. ಈತನ ಎಲ್ಲಾ ಪ್ರತಿಕೃತಿಗಳು ಮತ್ತೊಂದು ದಾಖಲೆಯಾಗಲಿ ಎಂದು ಅಭಿನಂದಿಸೋಣ..