ಯಲ್ಲಾಪುರ: ಮುಂಡಗೋಡದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಯಲ್ಲಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ಹಿತ್ಲಳ್ಳಿ ವಿದ್ಯಾರ್ಥಿಗಳು, ಗಂಡುಮಕ್ಕಳ ಥ್ರೋಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

RELATED ARTICLES  ವೈಜ್ಞಾನಿಕ ವೈಚಾರಿಕ ಹಿನ್ನೆಲೆಯ ಅರ್ಥಪೂರ್ಣ ಹಬ್ಬ ಮಕರ ಸಂಕ್ರಾಂತಿ

ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ದೇವಾನಂದ ಕೆರೆಮನೆರವರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ನಾಗೇಂದ್ರ ಹೆಗಡೆ ಹಾಗೂ ಸದಸ್ಯರು ಮತ್ತು ಮುಖ್ಯಾಧ್ಯಾಪಕರಾದ ಕಮಲಾಕರ ಭಟ್ ಹಾಗೂ ಶಿಕ್ಷಕರು, ಜೈ ಹಿಂದ್ ಯುವಕ ಸಂಘ, ಊರ ನಾಗರಿಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭಕೋರಿದ್ದಾರೆ.

RELATED ARTICLES  ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ.

ವರದಿ:ಎನ್ ರಾಮು ಹಿರೇಗುತ್ತಿ